ಉಡುಪಿಯಲ್ಲಿ 32 ವರ್ಷದ ಮಹಿಳೆ 9 ವರ್ಷದ ಮಗಳೊಂದಿಗೆ ನಾಪತ್ತೆ
Tuesday, August 8, 2023
ಉಡುಪಿ: ನಗರದ ನಯಂಪಳ್ಳಿ ನಿವಾಸಿ ಅಕ್ಷತಾ ಎಂಬ 32 ವರ್ಷ ಪ್ರಾಯದ ಮಹಿಳೆ ತನ್ನ 9 ವರ್ಷ ಪ್ರಾಯದ ಮಗಳಾದ ಖುಷಿಯೊಂದಿಗೆ ಎ.30ರಂದು ಮನೆಯಿಂದ ಹೊರಗೆ ಹೋದವರು ವಾಪಾಸು ಬಾರದೇ ನಾಪತ್ತೆಯಾಗಿದ್ದಾರೆ.
ಅಕ್ಷತಾ 5 ಅಡಿ 4 ಇಂಚು ಎತ್ತರ, ಸಾಧಾರಣ ಶರೀರ, ಗೋಧಿ ಮೈಬಣ್ಣ, ದುಂಡು ಮುಖ ಹೊಂದಿದ್ದು, ಕನ್ನಡ, ಹಿಂದಿ ಹಾಗೂ ತುಳು ಭಾಷೆ ಮಾತನಾಡುತ್ತಾರೆ. ಖುಷಿ 4 ಅಡಿ 2 ಇಂಚು ಎತ್ತರ, ಸಾಧಾರಣ ಶರೀರ, ಗೋಧಿ ಮೈಬಣ್ಣ, ದುಂಡು ಮುಖ ಹೊಂದಿದ್ದು ಕನ್ನಡ, ಇಂಗ್ಲಿಷ್ ಹಾಗೂ ತುಳು ಭಾಷೆ ಮಾತನಾಡುತ್ತಾರೆ.
ಇವರ ಬಗ್ಗೆ ಮಾಹಿತಿ ದೊರೆತಲ್ಲಿ ಉಡುಪಿ ನಗರ ಪೊಲೀಸ್ ಠಾಣಾಧಿಕಾರಿಯನ್ನು ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.