ಕಾಸರಗೋಡು- ವಾಹನದಡಿಗೆ ಬಿದ್ದು 4 ವರ್ಷದ ನರ್ಸರಿ ವಿದ್ಯಾರ್ಥಿನಿ ಮೃತ್ಯು
Thursday, August 24, 2023
ಕಾಸರಗೋಡು : ಶಾಲಾ ವಾಹನದಡಿಗೆ ಬಿದ್ದು 4 ವರ್ಷದ ನರ್ಸರಿ ವಿದ್ಯಾರ್ಥಿನಿ ಮೃತಪಟ್ಟ ದಾರುಣ ಘಟನೆ ಕಾಸರಗೋಡು ಜಿಲ್ಲೆಯ ಕಂಬಾರ್ ಸಿರಿಬಾಗಿಲು ಎಂಬಲ್ಲಿ ನಡೆದಿದೆ.
ಸಿರಿ ಬಾಗಿಲಿನ ಮುಹಮ್ಮದ್ ಸುಬೈರ್ ಎಂಬವರ ಪುತ್ರಿ ಆಯಿಷಾ ಸೆಯಾ (4) ಮೃತಪಟ್ಟ ವಿದ್ಯಾರ್ಥಿನಿ.
ಮನೆ ಸಮೀಪ ಈ ದುರಂತ ನಡೆದಿದೆ. ಶಾಲೆ ಬಿಟ್ಟು ಮನೆ ಬಳಿ ಬಾಲಕಿಯನ್ನು ಇಳಿಸಿ ಬಸ್ಸನ್ನು ಹಿಂದಕ್ಕೆ ತೆಗೆಯುತ್ತಿದ್ದಾಗ ಅದೇ ಬಸ್ಸಿನಡಿ ಸಿಲುಕಿ ಮಗು ಸಾವನ್ನಪ್ಪಿದೆ.
ಸ್ಥಳೀಯರು ಧಾವಿಸಿ ಬಂದು ಕೂಡಲೇ ವಿದ್ಯಾರ್ಥಿನಿಯನ್ನು ಕಾಸರಗೋಡಿನ ಖಾಸಗಿ ಆಸ್ಪತ್ರೆಗೆ ತಲುಪಿಸಿದರೂ ಆಗಲೇ ಮೃತಪಟ್ಟಿದ್ದಳು ಎಂದು ತಿಳಿದುಬಂದಿದೆ.
ಕಾಸರಗೋಡು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.