ಕಾರವಾರದಲ್ಲಿ ಒಂದು ಕೆಜಿ ತೂಕದ 48 ಸೆಂ.ಮೀ. ಉದ್ದದ ಬಂಗುಡೆ ಮೀನು ಪತ್ತೆ
Tuesday, August 29, 2023
ಕಾರವಾರ: ದೇಶದಲ್ಲೇ ಅತೀ ದೊಡ್ಡದೆನ್ನಬಹುದಾದ, ಒಂದು ಕೆಜಿ ತೂಕದ ಬಂಗುಡೆ ಮೀನು ಕಾರವಾರದಲ್ಲಿ ರವಿವಾರ ಪತ್ತೆಯಾಗಿದೆ. ಮೀನುಗಾರರು ಬೀಸಿದ ಬಲೆಗೆ ಬಿದ್ದಿರುವ ಈ ಮೀನು ಬರೋಬ್ಬರಿ 48 ಸೆಂಟಿ ಮೀಟರ್ ಉದ್ದವಿದೆ.
ಈವರೆಗೆ ದೊರಕಿರುವ ಅತೀ ದೊಡ್ಡ ಬಂಗಡೆ ಮೀನು ಇದು ಎಂದು ಹೇಳಲಾಗುತ್ತದೆ. ಭಾರತದಲ್ಲಿ ಈತನಕ 32 ಸೆಂಮೀ, 42 ಸೆಂಮೀ ಉದ್ದದ ಬಂಗುಡೆ ಸಿಕ್ಕಿತ್ತು ಎಂದು ದಾಖಲಾಗಿದೆ. ಇಂದು ಸಿಕ್ಕಿರುವ ಬಂಗುಡೆ ಈ ದಾಖಲೆ ಮುರಿದು, ಹೊಸ ದಾಖಲೆಯನ್ನು ಮಾಡಿದೆ. ಇದು ನವೀನ್ ಹರಿಕಂತ್ರ ಎಂಬುವವರರಿಗೆ ಸಿಕ್ಕಿತ್ತು. ಇದನ್ನು ಕಡಲಜೀವಶಾಸ್ತ್ರ ವಿಭಾಗದ ಶಿವಕುಮಾರ್ ಹರಗಿ ಎಂಬ ಉಪನ್ಯಾಸಕರಿಗೆ ನೀಡಲಾಗಿದೆ. ಅವರು ಈ ದೊಡ್ಡ ಬಂಗುಡೆ ರಕ್ಷಿಸಿ ಇಡುವುದಾಗಿ ತಿಳಿಸಿದ್ದಾರೆ.
ಈ ಬಂಗುಡೆ ಮೀನು 19 ಇಂಚು ಉದ್ದವಿದ್ದು, 4.5 ಇಂಚು ಅಗಲವಿದೆ. ಒಂದು ಕೆಜಿಯಷ್ಟು ತೂಕವುಳ್ಳದ್ದಾಗಿದೆ.