5 ವರ್ಷದ ಬಾಲಕಿಯ ಅತ್ಯಾಚಾರ ಪ್ರಕರಣ- ಆರೋಪಿ ಹಿಂದೆಯು ಪೋಕ್ಸೋ ಪ್ರಕರಣ ಆರೋಪಿಯಾಗಿದ್ದ!
Wednesday, August 2, 2023
ಕೊಚ್ಚಿ : ವಾರದ ಹಿಂದೆ ರಾಜ್ಯದಲ್ಲಿ ನಡೆದಿರುವ 5 ವರ್ಷದ ಬಾಲಕಿ ಮೇಲಿನ ಅತ್ಯಾಚಾರ ಹಾಗೂ ಕೊಲೆ ಪ್ರಕರಣದ ಆರೋಪಿಗೆ ಅಪರಾಧದ ಹಿನ್ನೆಲೆ ಇದ್ದು, ಆತನ ವಿರುದ್ಧ 5 ವರ್ಷದ ಹಿಂದೆಯೇ ಮಕ್ಕಳ ವಿರುದ್ಧ ಲೈಂಗಿಕ ಅಪರಾಧಗಳ ತಡೆ ಕಾಯ್ದೆ (ಪೋಕ್ಸೋ) ಪ್ರಕರಣ ದಾಖಲಾಗಿದೆ ಎಂದು ಕೇರಳ ರಾಜ್ಯ ಪೊಲೀಸರು ಮಂಗಳವಾರ ಹೇಳಿದ್ದಾರೆ.
'ಅತ್ಯಾಚಾರ, ಕೊಲೆ ಪ್ರಕರಣದಲ್ಲಿ ಬಂಧಿತನಾಗಿರುವ
ಆರೋಪಿ ಅಶ್ವಾಕ್ ನವ ದೆಹಲಿಯಲ್ಲಿ ಅಪರಾಧ ಕೃತ್ಯವೊಂದರಲ್ಲಿ ಭಾಗಿಯಾಗಿದ್ದು, ಒಂದು ತಿಂಗಳ ಕಾಲ ಜೈಲಿನಲ್ಲಿದ್ದ. ಬಳಿಕ ಜಾಮೀನು ಪಡೆದು ಹೊರಬಂದಿದ್ದ ಎಂದು ಅಳುವ (ಗ್ರಾಮೀಣ) ಪೊಲೀಸ್ ವರಿಷ್ಠಾಧಿಕಾರಿ ವಿವೇಕ್ ಕುಮಾರ್ ಪತ್ರಕರ್ತರಿಗೆ ಮಾಹಿತಿ ನೀಡಿದ್ದಾರೆ.
“2018ರಲ್ಲಿ ಉತ್ತರಪ್ರದೇಶದ ಗಾಜಿಯಾಪು
ಚಾರರಣರದಲ್ಲಿ 10 ವರ್ಷದ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯಕ್ಕೆ ಯತ್ನಿಸಿದ್ದ ಆರೋಪದಲ್ಲಿ ಅಲ್ಲಿನ ಪೊಲೀಸರು ಆತನನ್ನು ಬಂಧಿಸಿದ್ದರು. ಆರೋಪಿಯ ಹಿನ್ನೆಲೆ, ಮಾಹಿತಿಯನ್ನು ಪೊಲೀಸರು ಕಲೆ ಹಾಕುತ್ತಿರುವಾಗ ಆತನಿಗೆ ಅಪರಾಧದ ಹಿನ್ನೆಲೆ ಇರುವುದು ತಿಳಿದುಬಂದಿದೆ. ಆರೋಪಿ ಮೂಲತಃ ಬಿಹಾರದ ನಿವಾಸಿಯೇ, ಕೇರಳಕ್ಕೆ ವಲಸೆ ಕಾರ್ಮಿಕನಾಗಿ ಬರುವ ಮುನ್ನ ಆತ ಇತರೆಡೆ ಗಳಲ್ಲಿ ಅಪರಾಧ ಕೃತ್ಯಗಳನ್ನು ಎಸಗಿದ್ದಾನೆಯೇ ಎನ್ನುವ ಬಗ್ಗೆಯೂ ವಿವರವಾಗಿ ಪರಿಶೀಲಿಸಲಾಗುತ್ತಿದೆ' ಎಂದೂ ಅವರು ತಿಳಿಸಿದ್ದಾರೆ.
ಈ ನಡುವೆ ಆರೋಪಿಯನ್ನು ಅಳುವ ಸಮೀಪದ ಉಪ ಕಾರಾಗೃಹಕ್ಕೆ ಭಾನುವಾರ ಕರೆ ತರಲಾಗಿದ್ದು, ಆರೋಪಿಯ ಗುರುತು ಪತ್ತೆಗಾಗಿ ಪರೇಡ್ ನಡೆಸಲಾಗಿದೆ. ಈ ವೇಳೆ ಕನಿಷ್ಠ ಮೂವರು ಅರೋಪಿಯ ಗುರುತು ಪತ್ತೆ ಹಚ್ಚಿದ್ದಾರೆ' ಎಂದು
ತಿಳಿಸಿರುವ ಪೊಲೀಸರು ಹೆಚ್ಚಿನ ಮಾಹಿತಿಯನ್ನು ಬಹಿರಂಗ ಪಡಿಸಿಲ್ಲ.
'ಪೊಲೀಸರು ನಡೆಸಿದ ಪರೇಡ್ ಆರೋಪಿಯನ್ನು ಗುರುತು ಹಿಡಿದಿರುವೆ. ಆತನಿಗೆ ಗರಿಷ್ಠ ಪ್ರಮಾಣದ ಶಿಕ್ಷೆ ಆಗಬೇಕು. ಆ ದಿನ ಅಪರಾಧ ಕೃತ್ಯ ಎಸಗುವ ಮುನ್ನ ಆರೋಪಿ ಐದು ವರ್ಷದ ಬಾಲಕಿಯನ್ನು ಮಾರುಕಟ್ಟೆಯೊಳಗೆ ಕರೆದೊ ಯ್ದಿದ್ದನ್ನು ನೋಡಿರುವೆ. ಆತನ ವಿರುದ್ಧ ಯಾವ ಸ್ಥಳದಲ್ಲಾದರೂ ನಾನು ಸಾಕ್ಷ್ಯ ನುಡಿಯಲು ಸಿದ್ಧ ಎಂದು ಸ್ಥಳೀಯ ಕಾರ್ಮಿಕ ತಾಜುದ್ದೀನ್ ಸುದ್ದಿಗಾರರಿಗೆ ತಿಳಿಸಿದ್ದಾರೆ.
'ಆರೋಪಿ ಆಲಂನನ್ನು ವಶಕ್ಕೆ ಪಡೆಯಲು ಈಗಾಗಲೇ ಅರ್ಜಿ ಸಲ್ಲಿಸಿದ್ದೇವೆ. ಗುರುತು ಪತ್ತೆಯ ಪರೇಡ್ ಪ್ರಕ್ರಿಯೆ ಮುಗಿದ ಬಳಿಕ ಆತನನ್ನು ವಶಕ್ಕೆ ಪಡೆಯುವ ಸಾಧ್ಯತೆ ಇದೆ. ಉಳಿದ ವಿಚಾರಗಳನ್ನು ನ್ಯಾಯಾಲಯ ತೀರ್ಮಾನಿಸಲಿದೆ' ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.