-->
ತನ್ನ ಸ್ವಂತದ ಹಣದಿಂದ 600 ಕುಟುಂಬಕ್ಕೆ ಮನೆ ನಿರ್ಮಾಣ: ಕರ್ನಾಟಕದ ಅಪರೂಪದ ಜನಪ್ರತಿನಿಧಿಯ ಘೋಷಣೆ

ತನ್ನ ಸ್ವಂತದ ಹಣದಿಂದ 600 ಕುಟುಂಬಕ್ಕೆ ಮನೆ ನಿರ್ಮಾಣ: ಕರ್ನಾಟಕದ ಅಪರೂಪದ ಜನಪ್ರತಿನಿಧಿಯ ಘೋಷಣೆ

ತನ್ನ ಸ್ವಂತದ ಹಣದಿಂದ 600 ಕುಟುಂಬಕ್ಕೆ ಮನೆ ನಿರ್ಮಾಣ: ಕರ್ನಾಟಕದ ಅಪರೂಪದ ಜನಪ್ರತಿನಿಧಿಯ ಘೋಷಣೆ







ತನ್ನ ಸ್ವಂತದ ಹಣದಿಂದ 600 ಕುಟುಂಬಕ್ಕೆ ಉಚಿತವಾಗಿ ಮನೆ ನಿರ್ಮಾಣ ಮಾಡಿಕೊಡುತ್ತೇನೆ ಎಂದು ಹೇಳುವ ಮೂಲಕ ಕರ್ನಾಟಕದ ಅಪರೂಪದ ಜನಪ್ರತಿನಿಧಿಯೊಬ್ಬರು ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದ್ದಾರೆ.


ಅವರ ಬೇರಾರೂ ಅಲ್ಲ, ರಿಯಲ್ ಎಸ್ಟೇಟ್ ಉದ್ಯಮಿ, ಪುತ್ತೂರಿನ ಶಾಸಕ ಅಶೋಕ್ ಕುಮಾರ್ ರೈ.



ಪುತ್ತೂರು ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಯಾವುದೇ ಬಡವರು ಮನೆ, ಅನ್ನ, ಬಟ್ಟೆ, ಬೆಳಕು ಇಲ್ಲದೆ ಕೊರಗಬಾರದು. ಈ ನಿಟ್ಟಿನಲ್ಲಿ ತನ್ನ ನೇತೃತ್ವದ ರೈ ಎಸ್ಟೇಟ್ ಎಜುಕೇಶನಲ್ ಆಂಡ್ ಚಾರಿಟೆಬಲ್ ಟ್ರಸ್ಟ್‌ನಿಂದ ಈಗಾಗಲೇ ನೋಂದಣಿಯಾಗಿರುವ 600 ಬಡವರಿಗೆ ನಿವೇಶನ ನೀಡಲಾಗುವುದು. ಇದಕ್ಕಾಗಿ ಐದು ಎಕರೆ ಭೂಮಿಯನ್ನು ಖರೀದಿ ಮಾಡಲಾಗಿದೆ ಎಂದು ಶಾಸಕ ಅಶೋಕ್ ರೈ ಹೇಳಿದ್ದಾರೆ.



ಪುತ್ತೂರು ನಗರಸಭೆಯ ಹಳೆ ಕಚೇರಿ ಕಟ್ಟಡದಲ್ಲಿ ಸೋಮವಾರ ಆರಂಭಿಸಲಾದ ಶಾಸಕರ ಕಚೇರಿಯ ಉದ್ಘಾಟನಾ ಸಮಾರಂಭದಲ್ಲಿ ಅವರು ಈ ಘೋಷಣೆ ಮಾಡಿ ತಮ್ಮ ಮಹತ್ವಾಕಾಂಕ್ಷಿ ಯೋಜನೆಯನ್ನು ಪ್ರಕಟಿಸಿದ್ದಾರೆ.


ಜನಸೇವೆಗೆ ಸಹಾಯಕರು: 2.25 ಲಕ್ಷ ಸಂಬಳ ಕೈಯಿಂದ ಖರ್ಚು!

ವಿವಿಧ ಕೆಲಸಗಳಿಗೆ ಶಾಸಕರ ಕಚೇರಿಗೆ ಬರುವ ಜನರಿಗೆ ಅನುಕೂಲ ಕಲ್ಪಿಸುವ ಉದ್ದೇಶದಿಂದ ಸರ್ಕಾರಿ ಆಪ್ತ ಸಹಾಯಕರು ಮಾತ್ರವಲ್ಲದೆ ಬೇರೆಯೇ ಆದ ಏಳು ಮಂದಿ ಸಿಬ್ಬಂದಿಯನ್ನು ಶಾಸಕ ಅಶೋಕ್ ರೈ ನೇಮಿಸಿಕೊಂಡಿದ್ದಾರೆ.


ಇನ್ನು ತಮ್ಮ ಕ್ಷೇತ್ರದ ಜನರಿಗೆ ವೈದ್ಯಕೀಯ, ಕಂದಾಯ ಹಾಗೂ ಇತರ ನಾಗರಿಕ ಸಮಸ್ಯೆಗಳು ಸೇರಿ ಪ್ರತಿ ಇಲಾಖೆಗೆ ಸಂಬಂಧಿಸಿದ ಜನರ ಕೆಲಸಗಳನ್ನು ಈ ಸಹಾಯಕರು ಮಾಡಲಿದ್ದಾರೆ. ಇದಕ್ಕೆ ಪೂರಕವಾಗಿ ರೈ ಎಸ್ಟೇಟ್ ಎಜುಕೇಶನಲ್ ಆಂಡ್ ಚಾರಿಟೆಬಲ್ ಟ್ರಸ್ಟ್‌ಗೆ ಸಂಬಂಧಿಸಿದ ಇಬ್ಬರು ಸಹಾಯಕರು ಇದ್ದಾರೆ.


ತಮ್ಮ ಕೆಲಸಗಳಿಗೆ ಬೆಂಗಳೂರಿಗೆ ಹೋಗುವವರಿಗೆ ಅನುಕೂಲ ಆಗುವಂತೆ ಅಲ್ಲಿಯೂ ಇಬ್ಬರು ಸಹಾಯಕರನ್ನು ನಿಯೋಜಿಸಲಾಗಿದೆ.


ಈ ಎಲ್ಲ ಸಹಾಯಕರಿಗೆ ಶಾಸಕ ಅಶೋಕ್ ರೈ ತಮ್ಮ ಕೈಯಿಂದ 2.25 ಲಕ್ಷ ಸಂಬಳ ನೀಡುತ್ತಿದ್ದಾರೆ ಎಂದು ಸ್ವತಃ ಶಾಸಕರು ಮಾಹಿತಿ ನೀಡಿದ್ದಾರೆ.


Ads on article

Advertise in articles 1

advertising articles 2

Advertise under the article