ಮೊಬೈಲ್ ಚಾರ್ಜರ್ ಬಾಯಿಗೆ ಹಾಕಿದ 8 ತಿಂಗಳ ಮಗು- ವಿದ್ಯುತ್ ಪ್ರವಹಿಸಿ ದುರ್ಮರಣ
Wednesday, August 2, 2023
ಕಾರವಾರ: ಮೊಬೈಲ್ ಚಾರ್ಜರ್ ಬಾಯಿಯಲ್ಲಿ ಹಾಕಿ ಎಂಟು ತಿಂಗಳ ಮಗು ಸಾವನ್ನಪ್ಪಿದ ಘಟನೆ ಬುಧವಾರ ತಾಲೂಕಿನ ಸಿದ್ದರದಲ್ಲಿ ನಡೆದಿದೆ.
ಹೆಸ್ಕಾಂ ಗುತ್ತಿಗೆ ಆಧಾರದ ಉದ್ಯೋಗಿ ಸಂತೋಷ್ ಹಾಗೂ ಸಂಜನಾ ಅವರ ಎಂಟು ತಿಂಗಳ ಹೆಣ್ಣು ಮಗು ಸಾನಿಧ್ಯ ಮೃತಪಟ್ಟಿದೆ.
ಮೊಬೈಲ್ ಚಾರ್ಜ್ ಹಾಕಿ ತೆಗೆದ ನಂತರ ಪಾಲಕರು ಸ್ವಿಚ್
ಬಂದ್ ಮಾಡಿರಲಿಲ್ಲ. ಮಗು ಚಾರ್ಜರ್ ಪಿನ್ ಬಾಯಲ್ಲಿ ಹಾಕಿದಾಗ ಮಗುವಿಗೆ ಶಾಕ್ ತಗುಲಿದೆ.
ತಕ್ಷಣ ಬೈಕ್ ನಲ್ಲಿ ಮಗುವನ್ನು ಕ್ರಿಮ್ಸ್ ಆಸ್ಪತ್ರೆಗೆ ಕರೆತರುವಾಗ ಮಗು ಮೃತಪಟ್ಟಿದೆ. ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.