ವೀರರಾಣಿ ಅಬ್ಬಕ್ಕ ಜೈನ ಮಹಿಳಾ ಸಂಘ- ಮಂಗಳೂರಿನಲ್ಲಿ ವಾರ್ಷಿಕೋತ್ಸವ ಮತ್ತು ಆಹಾರೋತ್ಸವ
Tuesday, August 1, 2023
ವೀರರಾಣಿ ಅಬ್ಬಕ್ಕ ಜೈನ ಮಹಿಳಾ ಸಂಘದ ಆಶ್ರಯದಲ್ಲಿ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾನೂನು ಕಾಲೇಜ್ ನ ಸಭಾಂಗಣದಲ್ಲಿ ವಾರ್ಷಿಕೋತ್ಸವ ಹಾಗೂ ಆಹಾರೋತ್ಸವ ಕಾರ್ಯಕ್ರಮ ನಡೆಯಿತು
ಕಾರ್ಯಕ್ರಮದ ಉದ್ಘಾಟನೆ ಮಂಗಳೂರು ನಗರ ಉಪ ಪೊಲೀಸ್ ಆಯುಕ್ತ (ಕಾನೂನು ಮತ್ತ ಸುವ್ಯವಸ್ಥೆ) ಅಂಶು ಕುಮಾರ್ ಹಾಗೂ ಅವರ ಪತ್ನಿ ಪ್ರಘ್ನಾ ನೆರವೇರಿಸಿದರು.
ಶ್ರೀಮತಿ ಸುಮನಾ ಪೂವಣಿ ಯವರ ಅಧ್ಯಕ್ಷತೆಯಲ್ಲಿ ಹಾಗೂ ಅತಿಥಿಗಳಾಗಿ ಡಾ.ಕುಸುಮ್ ತಂತ್ರಿ, ಡಾ.ಮಾಲತಿ ಹೆಗ್ಢೆ ಹಾಗೂ ಕಾರ್ಯದರ್ಶಿ ಡಾ.ಅಕ್ಷತಾ ಆದರ್ಶ್ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಹಲವಾರು ಕ್ಷೇತ್ರಗಳಲ್ಲಿ ಸಾಧನೆಗೈದ ಸಂಘದ ಕಾರ್ಯದರ್ಶಿಯಾದ ಡಾ.ಅಕ್ಷತಾ ಆದರ್ಶ್ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು
ಬಳಿಕ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ವೀರರಾಣಿ ಅಬ್ಬಕ್ಕ ಜೈನ ಮಹಿಳಾ ಸಂಘದ ಸದಸ್ಯರೇ ಮನೆಯಲ್ಲಿಯೇ ತಯಾರು ಮಾಡಿ ತಂದ ವಿವಿಧ 55 ಕ್ಕೂ ಅಧಿಕ ಬಗೆಯ ಆಹಾರವಾದ ಕೆಸುವಿನ ಚಟ್ನಿ, ತಿಮರೆ ಚಟ್ನಿ, ಅಕ್ಕಿ ರೊಟ್ಟಿ, ಹಜಂಕದ ದೋಸೆ, ಪತ್ರೋಡೆ, ಹಲಸಿನ ಕಡುಬು, ಅರಶಿನ ಎಲೆಯ ಕಡುಬು, ಪುದೀನ ರೈಸ್, ಕಾಯಿ ಗಂಜಿ, ಉಪ್ಪಡ್ ಪಚ್ಚೀರ್, ಗೋದು ಕೇಕ್, ಕಟ್ ಮಂಡಿಗೆ , ರಾಗಿ ಮಣ್ಣಿ, ಹಲಸಿನ ಹಣ್ಷಿನ ಹಂಗುಲಿ, ಖಾದ್ಯಗಳನ್ನು ತಂದಿದ್ದರು ಬಳಿಕ ಎಲ್ಲವೂ ಸೇರೀ ಸವಿದರು