ಭೀಕರ ರಸ್ತೆ ಅಪಘಾತದಲ್ಲಿ ರಸ್ತೆಗೆ ಹಾರಿ ಬಿತ್ತು ಸ್ಕೂಟಿ ಸವಾರನ ಕಣ್ಣುಗುಡ್ಡೆ
Tuesday, August 1, 2023
ಯಾದಗಿರಿ: ವಾಹನ ಅಪಘಾತದ ರಭಸಕ್ಕೆ ಸ್ಕೂಟಿ ಸವಾರನೊಬ್ಬನ ಕಣ್ಣುಗುಡ್ಡೆಯೇ ಕಿತ್ತು ರಸ್ತೆಗೆ ಬಿದ್ದಿರುವ ಬೀಕರ ಘಟನೆಯೊಂದು ಯಾದಗಿರಿ ನಗರದ ಲಕ್ಷ್ಮೀ ನಗರದಲ್ಲಿ ನಡೆದಿದೆ.
ಯಾದಗಿರಿ ತಾಲೂಕಿನ ಯಡ್ಡಳ್ಳಿ ಗ್ರಾಮದ ನಿವಾಸಿ ಚೆನ್ನಾರೆಡ್ಡಿ ಪಾಟೀಲ ಗಾಯಳು ವ್ಯಕ್ತಿ.
ರವಿವಾರ ನಸುಕಿನ ವೇಳೆ ಚೆನ್ನಾರೆಡ್ಡಿ ಪಾಟೀಲರು ಸ್ಕೂಟಿಯಲ್ಲಿ ಊರಿಗೆ ತೆರಳುತ್ತಿದ್ದರು. ಈ ವೇಳೆ ಅಪರಿಚಿತ ವಾಹನವೊಂದು ಅವರ ಸ್ಕೂಟಿಗೆ ಡಿಕ್ಕಿ ಹೊಡೆದಿದೆ. ವಾಹನ ಗುದ್ದಿದ ರಭಸಕ್ಕೆ ಅವರು ರಸ್ತೆಗೆ ಬಿದ್ದಿದ್ದಾರೆ. ಈ ಭೀಕರ ಅಪಘಾತದಲ್ಲಿ ಅವರ ಕಣ್ಣುಗುಡ್ಡೆಯೇ ಕಿತ್ತು ರಸ್ತೆಗೆ ಬಿದ್ದಿದೆ. ಗಾಯಾಳು ಸವಾರನನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ.
ಸವಾರನ ಕಣ್ಣುಗುಡ್ಡೆ ಹೊರಕ್ಕೆ ಬಿದ್ದಿರುವುದನ್ನು ಗಮನಿಸಿದ ಬೀರಲಿಂಗಪ್ಪ ಎನ್ನುವವರು ಗಾಯಾಳು ವ್ಯಕ್ತಿಗೆ ಸಹಾಯ ಮಾಡಿದ್ದಾರೆ. ಈ ಕಾರ್ಯಕ್ಕೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.