ಸುಳ್ಯ: ರಸ್ತೆ ಬದಿ ನಿಂದಿದ್ದ ಕಾರ್ಮಿಕರ ಮೇಲೆರಗಿದ ಕಾರು - ಮೂವರು ಬಲಿ
Thursday, August 31, 2023
ಸುಳ್ಯ: ರಸ್ತೆ ಬದಿ ನಿಂತಿದ್ದ ಕಾರ್ಮಿಕರ ಮೇಲೆ ಎರಗಿದ ಕಾರೊಂದು ಮೂವರು ಕಾರ್ಮಿಕರನ್ನು ಬಲಿ ಪಡೆದ ಘಟನೆ ಸುಳ್ಯ ತಾಲೂಕಿನ ಅಡ್ಕಾರಿನಲ್ಲಿ ನಡೆದಿದೆ.
ಹಾವೇರಿ ಜಿಲ್ಲೆಯ ರಾಣೆಬೆನ್ನೂರು ನಿವಾಸಿಗಳಾದ ಚಂದ್ರಪ್ಪ, ರೇಗಪ್ಪ ಮಾಂತೇಶ್ ಮೃತಪಟ್ಟ ದುರ್ದೈವಿಗಳು. ಕಾರ್ಮಿಕರು ಕೆಲಸದ ನಿಮಿತ್ತ ನಿನ್ನೆ ರಾತ್ರಿ ಸುಳ್ಯಕ್ಕೆ ಆಗಮಿಸಿದ್ದು ಅಚ್ಚಾರು ಎಂಬಲ್ಲಿನ ಕಟ್ಟಡವೊಂದರ ಕಂಪೌಂಡ್ ಒಳಗೆ ಉಳಿದಿದ್ದರು. ಅದರಲ್ಲಿ ನಾಲ್ವರು ಕಾರ್ಮಿಕರು ಇಂದು ಬೆಳಗ್ಗೆ ರಸ್ತೆಬದಿ ನಿಂತಿದ್ದರು.
ಬೆಳಗ್ಗೆ ಹುಣಸೂರು ಕಡೆಯಿಂದ ಮಂಗಳೂರಿಗೆ ಬರುತ್ತಿದ್ದ ಕಾರೊಂದು ಚಾಲಕನ ನಿಯಂತ್ರಣ ತಪ್ಪಿ ವಿರುದ್ಧ ದಿಕ್ಕಿನತ್ತ ಚಲಿಸಿ ರಸ್ತೆ ಬದಿ ನಿಂತಿದ್ದ ನಾಲ್ವರು ಕಾರ್ಮಿಕರಿಗೆ ಡಿಕ್ಕಿ ಹೊಡೆದಿದೆ. ಪರಿಣಾಮ ಮೂರು ಮಂದಿ ಕಾರ್ಮಿಕರು ಗಂಭೀರ ಗಾಯಗೊಂಡು ಆಸ್ಪತ್ರೆಗೆ ಸಾಗಿಸುವ ದಾರಿ ಮಧ್ಯೆ ಮೃತಪಟ್ಟಿದ್ದಾರೆ.