ALERT- ಮಂಗಳೂರಿನಲ್ಲಿ ಸಂಚಾರ ನಿಯಮ ಉಲ್ಲಂಘನೆ ಮಾಡಿದ್ರೆ ಕಾದಿದೆ ಡ್ರೈವಿಂಗ್ ಲೈಸೆನ್ಸ್ ರದ್ದು ಶಿಕ್ಷೆ!
ಮಂಗಳೂರು: ಸಂಚಾರ ನಿಯಮಗಳನ್ನು ಉಲ್ಲಂಘಿಸಿದರೆ ದಂಡ ಕಟ್ಟಿದರೆ ಸರಿ ಹೋಗುತ್ತೆ ಎನ್ನುವ ಭಾವನೆ ಇದೆ. ಆದರೆ ಮಂಗಳೂರಿನಲ್ಲಿ ಸಂಚಾರ ನಿಯಮ ಉಲ್ಲಂಘಿಸಿದರೆ ಡ್ರೈವಿಂಗ್ ಲೈಸೆನ್ಸ್ ರದ್ದಾಗುವ ಸಾಧ್ಯತೆ ಇದೆ . ಮಂಗಳೂರು ನಗರದಲ್ಲಿ ಈಗಾಗಲೇ ಸಂಚಾರ ನಿಯಮ ಉಲ್ಲಂಘಿಸಿದ 170 ವಾಹನ ಚಾಲಕರ ಡ್ರೈವಿಂಗ್ ಲೈಸೆನ್ಸ್ ರದ್ದುಪಡಿಸಲು ನಗರ ಪೊಲೀಸರು ಶಿಫಾರಸು ಮಾಡಿದ್ದಾರೆ.
2023 ರ ಜುಲೈ 27 ರಿಂದ 2023 ರ ಜೂನ್ 6 ವರೆಗೆ ಭಾರತೀಯ ಸಂಹಿತೆ 1860 ಹಾಗೂ ಭಾರತೀಯ ಮೋಟಾರು ವಾಹನ ಕಾಯ್ದೆ-1988/2019 ಅಡಿ ಸಂಚಾರ ಉಲ್ಲಂಘಿಸಿದ ಪ್ರಕರಣಗಳಲ್ಲಿ ಒಟ್ಟು 170 ವಾಹನ ಚಾಲಕರ ಡ್ರೈವಿಂಗ್ ಲೈಸೆನ್ಸ್ (DL) ಅಮಾನತು ಪಡಿಸುವ ಬಗ್ಗೆ ಪ್ರಾದೇಶಿಕ ಸಾರಿಗೆ ಕಚೇರಿಗೆ (RTO) ಮಂಗಳೂರು ನಗರ ಪೊಲೀಸರು ಪ್ರಸ್ತಾವನೆಯನ್ನು ಸಲ್ಲಿಸಿದ್ದಾರೆ.
ಅಪಘಾತ ಪ್ರಕರಣಗಳಲ್ಲಿ 24, ಓವರ್ ಸ್ಪೀಡ್ ಮತ್ತು ನಿರ್ಲಕ್ಷ್ಯ ಪ್ರಕರಣಗಳಲ್ಲಿ 12, ಸರಕು ಸಾಗಣೆಯ ವಾಹನ ಪ್ರಯಾಣಿಕರನ್ನು ಸಾಗಿಸುವ ಪ್ರಕರಣಗಳಲ್ಲಿ 11, ಚಾಲನೆ ಮಾಡುವಾಗ ಮೊಬೈಲ್ ಫೋನ್ ಬಳಸಿ ಪ್ರಕರಣಗಳಲ್ಲಿ 5, ಕೆಂಪು ಸಿಗ್ನಲ್ ಜಂಪಿಂಗ್ ಪ್ರಕರಣಗಳಲ್ಲಿ 7, ಟ್ರಿಪಲ್ ರೈಡಿಂಗ್ ಪ್ರಕರಣಗಳಲ್ಲಿ 3 , ಹೆಲ್ಮೆಟ್ ಕೇಸ್ ಇಲ್ಲದೆ ಸವಾರಿ ಪ್ರಕರಣಗಳಲ್ಲಿ 95, ಸೀಟ್ ಬೆಲ್ಟ್ ಇಲ್ಲದ ಪ್ರಕರಣಗಳಲ್ಲಿ 13 ವಾಹನ ಸವಾರರ ಡ್ರೈವಿಂಗ್ ಲೈಸೆನ್ಸ್ ರದ್ದುಪಡಿಸಲು ಮಂಗಳೂರು ಪೊಲೀಸರು RTO ಗೆ ಶಿಫಾರಸು ಮಾಡಿದ್ದಾರೆ.
ಕಳೆದ 11 ದಿನಗಳಲ್ಲಿ ವಾಹನ ಅಪಘಾತಗಳಿಂದ ಪ್ರಾಣ ಹಾನಿಯಾಗುವುದನ್ನು ತಪ್ಪಿಸುವ, ವಾಹನಗಳಲ್ಲಿ ಮಿತಿಮೀರಿ ಪ್ರಯಾಣಿಕರನ್ನು ಸಾಗಿಸುವ ಕುರಿತು 89 ಪ್ರಕರಣಗಳು ಹಾಗೂ ಏಕಮುಖ ಸಂಚಾರಕ್ಕೆ ವಿರುದ್ಧವಾಗಿ ವಾಹನ ಚಲಾಯಿಸುವ ಬಗ್ಗೆ ಆರು ಪ್ರಕರಣಗಳನ್ನು ದಾಖಲಿಸಲಾಗಿದೆ.
ಅದೇ ರೀತಿ ಮಂಗಳೂರು ನಗರ ಪೊಲೀಸ್ ಕಮೀಷನರೇಟ್ ಪ್ರತಿ ತಿಂಗಳು ನಡೆಸಲಾಗುವ ಫೋನ್-ಇನ್ ಕಾರ್ಯಕ್ರಮ, ಸಂಚಾರ ಸಂಪರ್ಕ ದಿವಸಗಳಲ್ಲಿ ಸಾರ್ವಜನಿಕರು ದೂರಿರುವಂತೆ ವಿಶೇಷ ಕಾರ್ಯಾಚಾರಣೆ ನಡೆಸಲಾಗಿದೆ. ಅದರಂತೆ 371 ತಪ್ಪು ಪಾರ್ಕಿಂಗ್ಗಾಗಿ ವೀಲ್ ಕ್ಲಾಂಪ್ ಹಾಕಲಾಗಿದೆ, 31 ಕರ್ಕಶ ಹಾರ್ನ್ 23 ಟಿಂಟ್ ಗ್ಲಾಸ್ ತೆಗೆಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.