ಆಳ್ವಾಸ್‌ನಲ್ಲಿ 77ನೇ ಸ್ವಾತಂತ್ರ್ಯೋತ್ಸವ : ಸರ್ವರ ಭಾರತ ದೇಶವೇ ಸಮೃದ್ಧ ದೇಶ- ಡಾ. ಮೋಹನ ಆಳ್ವ
ಆಳ್ವಾಸ್‌ನಲ್ಲಿ 77ನೇ ಸ್ವಾತಂತ್ರ್ಯೋತ್ಸವ : ಸರ್ವರ ಭಾರತ ದೇಶವೇ ಸಮೃದ್ಧ ದೇಶ- ಡಾ. ಮೋಹನ ಆಳ್ವ
ಸಮಾನತೆ, ಸಾಮರಸ್ಯ , ಸಮಾನತೆ, ಸುಸ್ಥಿರ, ಸರ್ವ ಜೀವಿಗಳ ನೆಲೆ ಭಾರತ ನಿರ್ಮಾಣವೇ ನಮ್ಮೆಲ್ಲರ ಗುರಿ ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ. ಮೋಹನ ಆಳ್ವ ಹೇಳಿದರು.
ಮೂಡಬಿದಿರೆಯ ಕೆ.ವಿ. ಸುಬ್ಬಣ್ಣ ಬಯಲು ರಂಗಮಂದಿರದಲ್ಲಿ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವತಿಯಿಂದ ನಡೆದ 77ನೇ ಸ್ವಾತಂತ್ರ್ಯೋತ್ಸವದಲ್ಲಿ ಅವರು ಮಾತನಾಡುತ್ತಿದ್ದರು.
ಅಂಚೆ, ರೈಲ್ವೇ, ತಂತ್ರಜ್ಞಾನಗಳ ಬೃಹತ್ ಜಾಲಗಳು, ಕಲ್ಲಿದ್ದಲು, ವಿದ್ಯುತ್, ಧಾನ್ಯ, ಸೆಣಬು, ಗೋಧಿ, ಸಕ್ಕರೆ, ಸಾಂಬಾರು, ಹಾಲು ಮತ್ಸ್ಯ, ಜವಳಿ ಉತ್ಪಾದನೆಗಳು, ಗುಡಿ ಕೈಗಾರಿಕೆ, ಶಿಲ್ಪಕಲೆ ಸೇರಿದಂತೆ ಹಲವು ಕ್ಷೇತ್ರಗಳು, ವಿಭಾಗಗಳಲ್ಲಿ ಭಾರತ ಮುಂಚೂಣಿಯಲ್ಲಿ ಇದೆ ಎಂಬುದನ್ನು ನೆನಪಿಸಿದ ಮೋಹನ್ ಆಳ್ವಾ, ಧರ್ಮ, ಜಾತಿ, ಭಾಷೆ, ಮತಗಳನ್ನು ಮೀರಿ ಬೆಳೆಯಬೇಕಾಗಿದೆ. ಸಾಮರಸ್ಯ ನಿರ್ಮಿಸಿ, ವೈರುಧ್ಯ, ವೈಮನಸ್ಸು, ಅಮಾನತೆಗಳನ್ನು ಹೋಗಲಾಡಿಸಬೇಕಾಗಿದೆ. ಏಕತೆ, ಸಂಪತ್ತಿನ ಸಮಾನ ಹಂಚಿಕೆ, ಲಿಂಗ ತಾರತಮ್ಯ ರಹಿತ, ಕ್ರೌರ್ಯ ಬಹಿಷ್ಕಾರಗಳಿಲ್ಲ ಸಮುದಾಯ ರೂಪಿಸಬೇಕಾಗಿದೆ. ಪಾರದರ್ಶಕ ಆಡಳಿತ ನಮ್ಮ ಮುಂದಿದೆ ಎಂದು ಹೇಳಿದರು.
ಭಾಷಾ ವೈವಿಧ್ಯತೆ ಕಲೆ, ಕೌಶಲ್ಯ, ಶ್ರಮಿಕರು, ಕೃಷಿಕರಿಗೆ ಆಶ್ರಯವಾಗುವ ಸಂಸ್ಥೆಗಳನ್ನು ರೂಪಿಸಬೇಕು. ಸರ್ವರ ಆರೋಗ್ಯ ಕಾಪಾಡಬಲ್ಲ ವೈದ್ಯಕೀಯ ವ್ಯವಸ್ಥೆ ಬೇಕಾಗಿದೆ ಎಂದು ಆಶಯ ವ್ಯಕ್ತಪಡಿಸಿದರು.
ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವ್ಯವಸ್ಥಾಪಕ ಟ್ರಸ್ಟಿಗಳಾದ ವಿವೇಕ್ ಆಳ್ವ, ಡಾ. ವಿನಯ್ ಆಳ್ವ, ಆಡಳಿತ ಮಂಡಳಿ ಸದಸ್ಯರಾದ ಜಯಶ್ರೀ ಅಮರನಾಥ್ ಶೆಟ್ಟಿ, ಉದ್ಯಮಿ ಶ್ರೀಪತಿ ಭಟ್ ಮೊದಲಾದ ಗಣ್ಯರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
For Video Click Here: