ಬಜರಂಗ ದಳದಿಂದ ಶಸ್ತ್ರಾಸ್ತ್ರ ತರಬೇತಿ ಶಿಬಿರ- ಪೊಲೀಸರಿಂದ ಕೇಸ್
Wednesday, August 2, 2023
ಗುವಾಹಟಿ: ದರಂಗ್ ಜಿಲ್ಲೆಯ ಶಾಲೆಯೊಂದರಲ್ಲಿ ಬಜರಂಗ ದಳ ಕಾರ್ಯಕರ್ತರು ಶಸ್ತ್ರಾಸ್ತ್ರಗಳ ತರಬೇತಿ ಪಡೆಯುತ್ತಿರುವ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಈ ಸಂಬಂಧ ಅಸ್ಸಾಂ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಮಂಗಲ್‌ದಾಯಿ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಪ್ರಕರಣದಲ್ಲಿ ಸಮುದಾಯಗಳ ನಡುವೆ ಕೋಮು ದಳ್ಳುರಿ ಹೊತ್ತಿಸಲು ಯತ್ನ ನಡೆಸಲಾಗಿದೆ ಎಂದು ಆರೋಪಿಸಲಾಗಿದೆ.
ಮಂಗಲ್‌ದಾಯಿ ಪ್ರದೇಶದ ಮೊರ್ನೊಯಿ ಗ್ರಾಮದ ಮಹರ್ಷಿ ವಿದ್ಯಾಮಂದಿರ ದಲ್ಲಿ ರಾಷ್ಟ್ರೀಯ ಬಜರಂಗ ದಳದಿಂದ ಬಂದೂಕು ಬಳಕೆ ಬಗ್ಗೆ ನೀಡಲಾಗುತ್ತಿರುವ ತರಬೇತಿಯ ವಿಡಿಯೊ ಆಧರಿಸಿ ಪ್ರಕರಣ ದಾಖಲಿಸಿದ್ದೇವೆ ಎಂದು ದರಂಗ್ ಪೊಲೀಸರು ಟ್ವಿಟ್ ಕೂಡ ಮಾಡಿದ್ದಾರೆ.
ಸುಮಾರು 350 ಯುವಕರಿಗೆ ಗನ್ ಚಲಾವಣೆ, ಅಧ್ಯಾತ್ಮ, ಸಮರಕಲೆಗಳ ಕುರಿತು ಶಿಬಿರದಲ್ಲಿ ತರಬೇತಿ ನೀಡಲಾಗಿದೆ ಎಂದು ಅಸ್ಸಾಂ ಡಿಜಿಪಿ ಜಿ.ಪಿ. ಸಿಂಗ್ ತಿಳಿಸಿದ್ದಾರೆ.