ಗ್ರಾಹಕರಿಗೆ ದಂಡ ಹಾಕಿ ಬ್ಯಾಂಕ್‌ಗಳಿಗೆ 35 ಸಾವಿರ ಕೋಟಿ ಸಂಗ್ರಹ!
ಗ್ರಾಹಕರಿಗೆ ದಂಡ ಹಾಕಿ ಬ್ಯಾಂಕ್‌ಗಳಿಗೆ 35 ಸಾವಿರ ಕೋಟಿ ಸಂಗ್ರಹ!
ಗ್ರಾಹಕರಿಗೆ ದಂಡ ಹಾಕಿ ವಾಣಿಜ್ಯ ಬ್ಯಾಂಕ್‌ಗಳು 35 ಸಾವಿರ ಕೋಟಿ ಸಂಗ್ರಹ ಮಾಡಿದೆ ಎಂದು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಮಾಹಿತಿ ನೀಡಿದೆ.
ಬ್ಯಾಂಕ್ ಖಾತೆಯಲ್ಲಿ ಕನಿಷ್ಟ ಮೊತ್ತ (Minimum Balance) ಉಳಿಸಿಕೊಳ್ಳದೇ ಇರುವುದಕ್ಕೆ ದಂಡ, ಮಿತಿಮೀರಿ ಎಟಿಎಂ ಬಳಕೆಗೆ ಶುಲ್ಕ ಹಾಗೂ ಎಸ್‌ಎಂಎಸ್ ಸೇವೆಗೆ ಶುಲ್ಕದ ಮೂಲಕ ವಾಣಿಜ್ಯ ಬ್ಯಾಂಕ್‌ಗಳು ಈ ಆದಾಯವನ್ನು ಗಳಿಸಿದೆ.
2018ರ ಆರ್ಥಿಕ ವರ್ಷದಿಂದ ಈಚೆಗೆ 35587.68 ಕೋಟಿ ರೂ.ಗಳನ್ನು ಈ ಮೂಲಕ ವಾಣಿಜ್ಯ ಬ್ಯಾಂಕ್‌ಗಳು ಸಂಗ್ರಹ ಮಾಡಿದೆ.
ರಾಷ್ಟ್ರೀಕೃತ ಬ್ಯಾಂಕ್‌ಗಳು ಮತ್ತು ಖಾಸಗಿ ವಲಯದ ಏಕ್ಸಿಸ್ ಬ್ಯಾಂಕ್, ಎಚ್‌ಡಿಎಫ್‌ಸಿ, ಇಂಡಸ್‌ಇಂಡ್ ಬ್ಯಾಂಕ್, ಐಸಿಐಸಿಐ ಬ್ಯಾಂಕ್ ಮತ್ತು ಐಡಿಬಿಐ ಬ್ಯಾಂಕ್‌ಗಳು ನೀಡಿದ ಅಂಕಿ ಅಂಶಗಳನ್ನು ಆಧರಿಸಿ ಈ ಮಾಹಿತಿ ನೀಡಲಾಗಿದೆ.
2015ರ ಜುಲೈ 1ರಂದು ಆರ್‌ಬಿಐ ಹೊರಡಿಸಿರುವ ಮಾರ್ಗಸೂಚಿಯಂತೆ ಉಳಿತಾಯ ಖಾತೆಯಲ್ಲಿ ಕನಿಷ್ಟ ಮೊತ್ತ ಉಳಿಸಿಕೊಳ್ಳದವರಿಗೆ ಬ್ಯಾಂಕ್ ಆಡಳಿತ ಮಂಡಳಿ ಒಪ್ಪಿರುವ ನೀತಿಯಂತೆ ದಂಡ ವಿಧಿಸಲು ಬ್ಯಾಂಕ್‌ಗಳಿಗೆ ಅಧಿಕಾರ ಇದೆ. ಆದರೆ, ಹೀಗೆ ವಿಧಿಸುವ ದಂಡವು ನ್ಯಾಯೋಚಿತವಾಗಿರಬೇಕು ಮತ್ತು ಸೇವೆಗಳನ್ನು ನೀಡುವುದಕ್ಕೆ ವಿಧಿಸುವ ಸರಾಸರಿ ವೆಚ್ಚಕ್ಕಿಂತ ಕಡಿಮೆ ಇರಬೇಕು.