-->
ಕೇ‌ರಳ BEACH ನಲ್ಲಿ ಕುಳಿತಿದ್ದ ಅಮೇರಿಕಾದ ಮಹಿಳೆಯ ಅತ್ಯಾಚಾರ

ಕೇ‌ರಳ BEACH ನಲ್ಲಿ ಕುಳಿತಿದ್ದ ಅಮೇರಿಕಾದ ಮಹಿಳೆಯ ಅತ್ಯಾಚಾರ


ಕರುನಾಗಪಲ್ಲಿ: ಇತ್ತೀಚೆಗೆ ಕೇರಳಕ್ಕೆ ಆಗಮಿಸಿ ಆಶ್ರಮವೊಂದರಲ್ಲಿ ತಂಗಿದ್ದ ಅಮೆರಿಕದ ಮಹಿಳೆಯ ಮೇಲೆ ಎರಡು ಮಂದಿ ಸಾಮೂಹಿಕ ಅತ್ಯಾಚಾರ ಎಸಗಿದ ಘಟನೆ ನಡೆದಿದೆ

 ಈ  ಪ್ರಕರಣಕ್ಕೆ ಸಂಬಂಧಿಸಿ ಆರೋಪಿಗಳನ್ನು ಮಂಗಳವಾರ ಬಂಧಿಸಲಾಗಿದೆ, ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.


ಜುಲೈ 31 ರಂದು 44 ವರ್ಷದ ಅಮೇರಿಕಾದ ಮಹಿಳೆ ಆಶ್ರಮದ ಬಳಿಯ ಕಡಲತೀರದಲ್ಲಿ ಒಬ್ಬಂಟಿಯಾಗಿ ಕುಳಿತಿದ್ದಾಗ ಈ  ಘಟನೆ ಸಂಭವಿಸಿದೆ.‌ ಈ ಮಹಿಳೆಯ ದೂರಿನ ಪ್ರಕಾರ, ಪುರುಷರು ಆಕೆಯ ಬಳಿಗೆ ಬಂದು ಸಿಗರೇಟ್ ಹಂಚಿಕೊಳ್ಳಲು ಮುಂದಾದರು ಮತ್ತು ಅವರು ನಿರಾಕರಿಸಿದಾಗ ಅವರು ರಮ್ ನೀಡಿ ಅತ್ಯಾಚಾರ ಎಸಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.


ಮದ್ಯ ಸೇವಿಸಿದ ಬಳಿಕ ಆಕೆಗೆ ಅಮಲೇರಿದ ಬಳಿಕ  ಬೈಕ್‌ನಲ್ಲಿ ಹಾಕಿಕೊಂಡು ಸಮೀಪದ ಖಾಲಿ ಮನೆಗೆ ಕರೆದೊಯ್ದು  ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ. ಮಹಿಳೆ ಆಗಸ್ಟ್ 1 ರಂದು ರಾತ್ರಿ ದೂರು ನೀಡಿದ್ದರು. ಮಹಿಳೆ ಜುಲೈ 22 ರಂದು ಕೇರಳಕ್ಕೆ ಬಂದಿದ್ದರು ಎಂದು ಸಂತ್ರಸ್ತೆಯ ದೂರನ್ನು ಉಲ್ಲೇಖಿಸಿ ಪೊಲೀಸರು ಹೇಳಿದ್ದಾರೆ.

Ads on article

Advertise in articles 1

advertising articles 2

Advertise under the article