-->
ಬೈಕ್ ಖರೀದಿಗೆ ಪಿತ್ರಾರ್ಜಿತ ಆಸ್ತಿ ಮಾರಾಟ ಮಾಡಿದ ಯುವಕ: ಕೋರ್ಟ್ ನೀಡಿದ ತೀರ್ಪೇನು ಗೊತ್ತೇ?

ಬೈಕ್ ಖರೀದಿಗೆ ಪಿತ್ರಾರ್ಜಿತ ಆಸ್ತಿ ಮಾರಾಟ ಮಾಡಿದ ಯುವಕ: ಕೋರ್ಟ್ ನೀಡಿದ ತೀರ್ಪೇನು ಗೊತ್ತೇ?

ಚೀನಾ: ಚೀನಾದಲ್ಲಿ ಹದಿಹರೆಯದ ಯುವಕನೊಬ್ಬ ಬೈಕ್ ಖರೀದಿಸಲೆಂದು 1 ಮಿಲಿಯನ್ yuan ($139,000) ಮೌಲ್ಯದ ಪಿತ್ರಾರ್ಜಿತ ಆಸ್ತಿಯನ್ನು ಅರ್ಧ ಬೆಲೆಗೆ ಮಾರಾಟ ಮಾಡಿದ್ದಾನೆ ಎಂದು ವರದಿಯಾಗಿದೆ. ಆದರೆ ಯುವಕ ಪೋಷಕರು ಕೋರ್ಟ್ ಮೆಟ್ಟಿಲೇರಿದ್ದು, ಕೋರ್ಟ್ ಈ ಮಾರಾಟವನ್ನು ರದ್ದುಗೊಳಿಸಲಾಗಿದೆ. 

ಈ ಘಟನೆ ಮಧ್ಯ ಚೀನಾದ ಹೆನಾನ್ ಪ್ರಾಂತ್ಯದಲ್ಲಿ ನಡೆದಿದೆ. ಕ್ಸಿಯೋಹು ಎಂಬ ಯುವಕ ತನ್ನ ಪೋಷಕರು ಬೈಕ್ ಖರೀದಿಸಲು ನಿರಾಕರಿಸಿದ ಹಿನ್ನೆಲೆಯಲ್ಲಿ ಅಜ್ಜನಿಂದ ಪಿತ್ರಾರ್ಜಿತವಾಗಿ ಬಂದ ಆಸ್ತಿಯನ್ನು ಮಾರಾಟ ಮಾಡಲು ಯುವಕ ನಿರ್ಧರಿಸಿದ್ದಾನೆ. ಆ ಬಳಿಕ ಆತ ಪೋಷಕರಿಗೆ ತಿಳಿಸದೆ ಆಸ್ತಿ ಏಜೆಂಟರನ್ನು ಸಂಪರ್ಕಿಸಿದ್ದಾನೆ. ಅದರಂತೆ $139,000 ಬೆಲೆಯ ಆಸ್ತಿಯನ್ನು $ 72,000ಗೆ ಮಾರಾಟ ಮಾಡಲು ಒಪ್ಪಿಕೊಳ್ಳಲಾಗಿದೆ. ಈ ಆಸ್ತಿ ಏಜೆಂಟ್ ಅದನ್ನು ಲಾಭದ ಉದ್ದೇಶದಿಂದ ಮತ್ತೋರ್ವ ಏಜೆಂಟರಿಗೆ ಮಾರಾಟ ಮಾಡಿದ್ದಾನೆ ಎಂದು ವರದಿಯಾಗಿದೆ. 

ಕ್ಸಿಯೋಹು ತಾಯಿಗೆ ಈ ವಿಚಾರ ತಿಳಿದ ಬಳಿಕ ಆಕೆ ಆಸ್ತಿ ಏಜೆಂಟರನ್ನು ಸಂಪರ್ಕಿಸಿ, ಒಪ್ಪಂದವನ್ನು ರದ್ದುಗೊಳಿಸುವಂತೆ ವಿನಂತಿಸಿಕೊಂಡಿದ್ದಾರೆ. ಆದರೆ ಅವರು ನಿರಾಕರಿಸಿದ್ದಾರೆ. ಆದ್ದರಿಂದ ಯುವಕನ ಪೋಷಕರು ಕಾನೂನು ಹೋರಾಟದ ಮೊರೆ ಹೋಗಿದ್ದಾರೆ.

ನ್ಯಾಯಾಧೀಶರು ಮಾರಾಟ ಪತ್ರವನ್ನು ಪರಿಶೀಲಿಸಿ, ಹದಿಹರೆಯದವರು ಮತ್ತು ಆಸ್ತಿ ಏಜೆಂಟ್​ಗಳ ನಡುವಿನ ಸಂಭಾಷಣೆಯನ್ನು ಆಲಿಸಿದ್ದಾರೆ. ಕೊನೆಗೆ ಯುವಕನಿಗೆ ಆಸ್ತಿಯ ಮಾರುಕಟ್ಟೆ ಮೌಲ್ಯದ ಬಗ್ಗೆ ತಿಳಿದಿರುವುದಿಲ್ಲ ಮತ್ತು ಆಸ್ತಿ ಏಜೆಂಟ್ ಆಸ್ತಿಯನ್ನು ಕಡಿಮೆ ಬೆಲೆಗೆ ಮಾರಾಟ ಮಾಡಲು ವಂಚಿಸಿದ್ದಾನೆ ಎಂಬ ತೀರ್ಮಾನಕ್ಕೆ ಬರಲಾಗಿದೆ. ಆ ನಂತರ ನ್ಯಾಯಾಲಯವು ಮಾರಾಟ ರದ್ದುಗೊಳಿಸಿ, ಆಸ್ತಿಯ ಮಾಲೀಕತ್ವವನ್ನು ಕ್ಸಿಯೋಹುಗೆ ನೀಡಿದೆ.

Ads on article

Advertise in articles 1

advertising articles 2

Advertise under the article