ಬೆಳ್ತಂಗಡಿ: ವೈದ್ಯರು ಇಲ್ಲದವೇಳೆ ಸಿಬ್ಬಂದಿಯಿಂದ ಇಂಜೆಕ್ಷನ್ - ಒಂದುವರೆ ತಿಂಗಳ ಹಸುಗೂಸು ಸಾವು
Thursday, August 10, 2023
ಬೆಳ್ತಂಗಡಿ: ವೈದ್ಯರು ಇಲ್ಲದ ವೇಳೆ ಆಸ್ಪತ್ರೆ ಸಿಬ್ಬಂದಿ ನೀಡಿರುವ ಇಂಜೆಕ್ಷನ್ ನಿಂದ ಅಡ್ಡ ಪರಿಣಾಮಕ್ಕೊಳಗಾದ ಒಂದೂವರೆ ತಿಂಗಳ ಹಸುಗೂಸು ಮೃತಪಟ್ಟ ಘಟನೆ ಬೆಳ್ತಂಗಡಿ ತಾಲೂಕು ಆಸ್ಪತ್ರೆಯಲ್ಲಿ ನಡೆದಿದೆ.
ಧರ್ಮಸ್ಥಳ ಮುಳಿಕ್ಕಾರು ನಿವಾಸಿ ಬಾಲಕೃಷ್ಣ ಮತ್ತು ಸವಿತಾ ದಂಪತಿಯ ಒಂದುವರೆ ತಿಂಗಳ ಹೆಣ್ಣು ಹಸುಗೂಸಿಗೆ ಕಫ, ಶೀತ ಆಗಿತ್ತೆಂದು ಒಂದೂವರೆ ತಿಂಗಳ ಹಸುಗೂಸನ್ನು ಬೆಳ್ತಂಗಡಿ ಸರ್ಕಾರಿ ಆಸ್ಪತ್ರೆಗೆ ತರಲಾಗಿತ್ತು. ಈ ವೇಳೆ ವೈದ್ಯರು ಇರಲಿಲ್ಲ. ಆದ್ದರಿಂದ ನರ್ಸ್ ಇಂಜೆಕ್ಷನ್ ನೀಡಿದ್ದು ಇದರಿಂದಾಗಿಯೇ ಮಗು ಸಾವನ್ನಪ್ಪಿದೆ ಎಂದು ಮನೆಯವರು ಆರೋಪ ಮಾಡಿದ್ದಾರೆ.
ವಿಚಾರ ತಿಳಿಯುತ್ತಲೇ ಮಾಜಿ ಶಾಸಕ ವಸಂತ ಬಂಗೇರ ಆಸ್ಪತ್ರೆಗೆ ಆಗಮಿಸಿ ವೈದ್ಯರು ಮತ್ತು ಸಿಬ್ಬಂದಿಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಆಸ್ಪತ್ರೆ ಸಿಬ್ಬಂದಿ ವಿರುದ್ಧ ಬೆಳ್ತಂಗಡಿ ಪೊಲೀಸ್ ಠಾಣೆಗೆ ದೂರು ನೀಡುವಂತೆ ಮಗುವಿನ ತಂದೆಗೆ ಸಲಹೆ ಮಾಡಿದ್ದಾರೆ. ಅದರಂತೆ, ಮಗುವಿನ ತಂದೆ ಧರ್ಮಸ್ಥಳ ಠಾಣೆಯಲ್ಲಿ ದೂರು ನೀಡಿದ್ದಾರೆ.