ತಾನು ಸಲಿಂಗಕಾಮಿಯಲ್ಲವೆಂದು ಎರಡನೇ ಮಹಡಿಯಿಂದ ಹಾರಿ ಪ್ರಾಣ ಕಳೆದುಕೊಂಡ ವಿದ್ಯಾರ್ಥಿ: ಹಾಸ್ಟೇಲ್ ನಲ್ಲಿ ನಡೆದದ್ದೇನು?
Saturday, August 12, 2023
ಕಲ್ಕತ್ತಾ: ಜಾಧವ್‍ಪುರ್ ವಿಶ್ವವಿದ್ಯಾಲಯದ ಪ್ರಥಮ ವರ್ಷದ 18 ವರ್ಷದ ವಿದ್ಯಾರ್ಥಿ ಸ್ವಾಪ್ನೋದೀಪ್ ಕುಂಡು, ಹಾಸ್ಟೆಲ್ ಕಟ್ಟಡದ ಎರಡನೇ ಮಹಡಿಯಿಂದ ಹಾರಿದ್ದು, ಇದೀಗ ಪೊಲೀಸ್ ತನಿಖೆಯಲ್ಲಿ ಆತ “ತಾನು ಸಲಿಂಗಕಾಮಿ ಅಲ್ಲ” ಎಂದು ಪದೇ ಪದೇ ಹೇಳುತ್ತಾ ಹೇಳುತ್ತಾ ಪ್ರಾಣ ಕಳೆದುಕೊಂಡಿದ್ದಾನೆ.
ಬಾಲ್ಕನಿಯಿಂದ ಹಾರುವಾಗ ಆತನ ದೇಹವು ಸಂಪೂರ್ಣ ಬೆತ್ತಲೆ ಸ್ಥಿತಿಯಲ್ಲಿ ಪತ್ತೆಯಾಗಿದೆ. ಶುಕ್ರವಾರ ಕಲ್ಕಾತ್ತಾ ಪೊಲೀಸರು ಸ್ವಾಪ್ನೋದೀಪ್ ಕುಂಡು ಸಾವಿಗೆ ಸಂಬಂಧಪಟ್ಟಂತೆ ಆರೋಪಿ ಸೌರಭ್ ಚೌಧರಿಯನ್ನು ಬಂಧಿಸಿದ್ದಾರೆ. ಆರೋಪಿ ಸೌರಭ್, ಈ ಹಿಂದೆ 2022ರಲ್ಲಿ ಜಾಧವ್‍ಪುರ್ ವಿಶ್ವವಿದ್ಯಾಲಯದಲ್ಲಿ ಗಣಿತಶಾಸ್ತ್ರದಲ್ಲಿ ಎಂಎಸ್ಸಿ ಪೂರ್ಣಗೊಳಿಸಿದ್ದು, ವಿಶ್ವವಿದ್ಯಾಲಯ ಹಾಸ್ಟೆಲ್‍ನಲ್ಲೇ ಉಳಿಯುತ್ತಿದ್ದನು.
ಪೊಲೀಸರು ತನಿಖೆಯಲ್ಲಿ ಮೃತ ಯುವಕನ ಮೇಲೆ ನಡೆದ ರಾಗಿಂಗ್ ಘಟನೆಯಲ್ಲಿ ತಾನೂ ಪಾಲ್ಗೊಂಡಿರುವುದಾಗಿ ಆರೋಪಿ ಸೌರಭ್ ಒಪ್ಪಿಕೊಂಡಿದ್ದಾನೆ. ಸದ್ಯ ಪೊಲೀಸರು ಆತನನ್ನು ಬಂಧಿಸಿದ್ದಾರೆ.
ಜೋರಾಗಿ ಶಬ್ದ ಕೇಳಿದ ನಂತರ ವಿದ್ಯಾರ್ಥಿಗಳು ಸ್ಥಳಕ್ಕೆ ಧಾವಿಸಿದಾಗ, ಸ್ವಾಪ್ನೋದೀಪ್ ರಕ್ತದ ಮಡುವಿನಲ್ಲಿ ಬಿದ್ದಿರುವುದು ಕಂಡುಬಂದಿದೆ. ಆತನನ್ನು ಚಿಕಿತ್ಸೆಗಾಗಿ ಕೆಪಿಸಿ ವೈದ್ಯಕೀಯ ಕಾಲೇಜಿಗೆ ಕರೆದೊಯ್ಯಲಾಯಿತು. ಆದರೂ ಆಸ್ಪತ್ರೆಯಲ್ಲಿ ಸ್ವಾಪ್ನೋದೀಪ್ ಕುಂಡು ಗುರುವಾರ ಬೆಳಿಗ್ಗೆ 4:30ರ ಸುಮಾರಿಗೆ ನಿಧನರಾಗಿದ್ದಾರೆ.