ಬೆಳ್ತಂಗಡಿ: ತೀವ್ರ ಅಸ್ವಸ್ಥತೆಯಿಂದ ನರ್ಸಿಂಗ್ ವಿದ್ಯಾರ್ಥಿನಿ ಸಾವು
Monday, August 14, 2023
ಬೆಳ್ತಂಗಡಿ: ಇಲ್ಲಿನ ನೆರಿಯ ಗ್ರಾಮದ 19ವರ್ಷದ ನರ್ಸಿಂಗ್ ವಿದ್ಯಾರ್ಥಿನಿ ತೀವ್ರ ಅಸ್ವಸ್ಥತೆಯಿಂದ ಮೃತಪಟ್ಟಿದ್ದಾಳೆ.
ಬೆಳ್ತಂಗಡಿಯ ನೆರಿಯ ಗ್ರಾಮದ ಸುಮಾ(19) ಮೃತಪಟ್ಟ ವಿದ್ಯಾರ್ಥಿನಿ
ಸುಮಾ ಮಂಗಳೂರಿನಲ್ಲಿ ಮೊದಲ ವರ್ಷದ ನರ್ಸಿಂಗ್ ವಿದ್ಯಾಭ್ಯಾಸ ಮಾಡುತಿದ್ದಳು. ಈಕೆ ಆಗಸ್ಟ್ 9 ರಂದು ಅಸ್ವಸ್ಥಗೊಂಡು ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಳು. ಆ ಬಳಿಕ ಅನಾರೋಗ್ಯಪೀಡಿತಳಾದ ಸುಮಾ ಚಿಕಿತ್ಸೆ ಪಡೆದು ಮನೆಯಲ್ಲಿದ್ದಳು. ಆದರೆ ಆ.11 ರಂದು ಅನಾರೋಗ್ಯ ಉಲ್ಬಣಗೊಂಡ ಹಿನ್ನೆಲೆಯಲ್ಲಿ ಮತ್ತೆ ಮಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಗುಣಮುಖರಾಗಿದ್ದಳು.
ಆದರೆ ಆ.13 ರಂದು ಸಂಜೆ ಮತ್ತೆ ತೀವ್ರವಾಗಿ ಅಸ್ವಸ್ಥಗೊಂಡ ಸುಮಾಳನ್ನು ಮನೆಯವರು ಆಸ್ಪತ್ರೆಗೆ ಸಾಗಿಸುವ ವ್ಯವಸ್ಥೆ ಮಾಡಿದ್ದಾರೆ. ಆದರೆ ಆಸ್ಪತ್ರೆಗೆ ಹೋಗುವಾಗ ಆಕೆ ದಾರಿ ಮಧ್ಯೆಯೇ ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಈಕೆಗೆ ಲೋಬಿಪಿ ಆಗಿತ್ತು ಎಂದು ಹೇಳಲಾಗಿದೆ.