ಪತಿಯ ಪರಸ್ತ್ರೀ ವ್ಯಾಮೋಹಕ್ಕೆ ಪತ್ನಿ ಬಲಿ: ಮಕ್ಕಳಿಬ್ಬರು ಅನಾಥರಾದರು
Sunday, August 20, 2023
ಗದಗ: ಬೇರೆ ಹೆಣ್ಣಿನ ವ್ಯಾಮೋಹಕ್ಕೆ ಬಿದ್ದಿರುವ ಕಾಮುಕನೊಬ್ಬ ತನ್ನ ಪತ್ನಿಯನ್ನೇ ಕತ್ತಿ ಹಿಸುಕಿ ಕೊಲೆಗೈದಿರುವ ಆಘಾತಕಾರಿ ಘಟನೆ ಗದಗ ತಾಲೂಕಿನ ಹೊಂಬಳ ಗ್ರಾಮದಲ್ಲಿ ನಡೆದಿದೆ.
ಸನಾ ಅಗಸಿಬಾಗಿಲ (25) ಹತ್ಯೆಯಾದ ದುರ್ದೈವಿ ಮಹಿಳೆ. ಸದ್ದಾಂ ಅಗಸಿಬಾಗಿಲ, ಕತ್ತು ಹಿಸುಕಿ ಕೊಲೆಗೈದ ಪಾಪಿ ಪತಿ. ಆರು ವರ್ಷಗಳ ಹಿಂದೆ ಇವರಿಗೆ ವಿವಾಹವಾಗಿತ್ತು. ಇಬ್ಬರು ಮಕ್ಕಳಿದ್ದಾರೆ.
ಬೇರೆ ಹೆಣ್ಣಿನ ಸಂಗ ಮಾಡಿದ್ದ ಸದ್ದಾಂ ಅಗಸಿಬಾಗಿಲ ತನ್ನ ಕುಟುಂಬವನ್ನು ನಿರ್ಲಕ್ಷಿಸಿದ್ದ. ಪರಸ್ತ್ರೀ ವ್ಯಾಮೋಹವನ್ನಜ ಪತ್ನಿ ಪ್ರಶ್ನೆ ಮಾಡುವುದಕ್ಕೆ ಆಕೆಯೊಂದಿಗೆ ನಿತ್ಯವು ಜಗಳ ಆಡುತ್ತಿದ್ದ. ಅಲ್ಲದೆ, ಕಿರುಕುಳ ನೀಡುತ್ತಿದ್ದ. ಇದೀಗ ಜಗಳ ತಾರಕಕ್ಕೇರಿ ಆಕೆಯನ್ನು ಸದ್ದಾಂ ಕತ್ತು ಹಿಸುಕಿ ಕೊಂದಿದ್ದಾನೆ ಎಂದು ಮೃತಳ ಕುಟುಂಬಸ್ಥರು ಆರೋಪ ಮಾಡಿದ್ದಾರೆ. ತಂದೆಯ ಪರಸ್ತ್ರೀ ಸಂಗಕ್ಕೆ ತಾಯಿಯನ್ನು ಕಳೆದುಕೊಂಡು ಇಬ್ಬರು ಮಕ್ಕಳು ಅಕ್ಷರಶಃ ಅನಾಥರಾಗಿದ್ದಾರೆ.
ಸನಾ ಅಗಸಿಬಾಗಿಲ ಮೃತದೇಹದ ಕತ್ತು ಮತ್ತು ಮುಖದ ಮೇಲೆ ಗಾಯ ಗುರುತು ಇದೆ. ಹೀಗಾಗಿ ಆಕೆಯನ್ನು ಕತ್ತು ಹಿಸುಕಿ ಕೊಲೆ ಮಾಡಿದ್ದಾನೆ ಎಂದು ಕುಟುಂಬಸ್ಥರು ಆರೋಪ ಮಾಡಿದ್ದಾರೆ. ಆರೋಪಿ ಸದ್ದಾಂ ಸೇರಿ ಆಕೆಯ ಕುಟುಂಬಸ್ಥರ ವಿರುದ್ಧ ಗದಗ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಸನಾ ಕುಟುಂಬ ಕೊಲೆ ಪ್ರಕಣ ದಾಖಲಿಸಿದೆ.