ಮಂಗಳೂರು: ಸಂಚಾರದಲ್ಲಿದ್ದ ಬಸ್ ನಿಂದ ಬಿದ್ದು ಕಂಡೆಕ್ಟರ್ ಸಾವು
Wednesday, August 30, 2023
ಮಂಗಳೂರು: ಸಂಚಾರಲ್ಲಿದ್ದ ಬಸ್ ನ ಮುಂಬಾಗಿಲಲ್ಲಿದ್ದ ಸಿಟಿ ಬಸ್ ನಿರ್ವಾಹಕ ಆಯತಪ್ಪಿ ಬಿದ್ದು ಮೃತಪಟ್ಟಿರುವ ಘಟನೆ ಮಂಗಳೂರಿನ ನಂತೂರಿನಲ್ಲಿ ನಡೆದಿದೆ.
ಈರಯ್ಯ(23) ಮೃತಪಟ್ಟ ಸಿಟಿ ಬಸ್ ನಿರ್ವಾಹಕ.
ಮಂಗಳವಾರ ಮಧ್ಯಾಹ್ನದ ವೇಳೆಗೆ ಇವರ ಸಿಟಿ ಬಸ್ ಪದುವಾದಿಂದ ಶಿವಭಾಗ್ ಕಡೆ ಸಂಚರಿಸುತ್ತಿತ್ತು. ಈ ವೇಳೆ ನಂತೂರು ವೃತ್ತದ ಬಳಿ ಬಸ್ ಬಂದಾಗ ಬಸ್ಸಿನ ಮುಂಬಾಗಿಲ ಬಳಿ ನಿಂತಿದ್ದ ಈರಯ್ಯ ಏಕಾಏಕಿ ಆಯತಪ್ಪಿ ಬಿದ್ದಿದ್ದಾರೆ. ಪರಿಣಾಮ ಗಂಭೀರವಾಗಿ ಗಾಯಗೊಂಡ ಅವರು ಮೃತಪಟ್ಟಿದ್ದಾರೆ ಎಂದು ಹೇಳಲಾಗಿದೆ.