-->
ವೈದ್ಯನ ನಿರ್ಲಕ್ಷ್ಯಕ್ಕೆ ಯುವಕ ಬಲಿ: ಜ್ವರಕ್ಕೆ ಇಂಜೆಕ್ಷನ್ ಪಡೆದ ಬಹುಅಂಗಾಂಗ ವೈಫಲ್ಯದಿಂದ ಮೃತ್ಯು

ವೈದ್ಯನ ನಿರ್ಲಕ್ಷ್ಯಕ್ಕೆ ಯುವಕ ಬಲಿ: ಜ್ವರಕ್ಕೆ ಇಂಜೆಕ್ಷನ್ ಪಡೆದ ಬಹುಅಂಗಾಂಗ ವೈಫಲ್ಯದಿಂದ ಮೃತ್ಯು

ಬೆಂಗಳೂರು: ವೈದ್ಯನ ನಿರ್ಲಕ್ಷ್ಯಕ್ಕೆ ಅಮಾಯಕ ಯುವಕನೋರ್ವನು ಬಲಿಯಾಗಿರುವ ಘಟನೆ ಬೆಂಗಳೂರು ನಗರದ ಮಾಗಡಿ ರಸ್ತೆಯಲ್ಲಿರುವ ಕೆ.ಪಿ. ಅಗ್ರಹಾರದಲ್ಲಿ ನಡೆದಿದೆ. 

ಅಮರ್​ ಶೆಟ್ಟಿ(31) ಮೃತಪಟ್ಟ ಯುವಕ.

ಯುವಕ ಮೃತಪಟ್ಟ ಘಟನೆಗೆ ಸಂಬಂಧಿಸಿದಂತೆ ಕೆ.ಪಿ.ಅಗ್ರಹಾರ ಪೊಲೀಸ್​ ಠಾಣೆಯಲ್ಲಿ ದೂರು ದಾಖಲಾಗಿದೆ. ಈ ಬಗ್ಗೆ ವೈದ್ಯ ಹಾಗೂ ಕ್ಲಿನಿಕ್​ ವಿರುದ್ಧ ಪ್ರಕರಣ ದಾಖಲಿಸಿಕೊಂಡು ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ.

ದುಬೈನಲ್ಲಿದ್ದ ಅಮರ್​ ಶೆಟ್ಟಿ ಒಂದು ವರ್ಷದ ಹಿಂದೆ ತಾಯ್ನಾಡಿಗೆ ವಾಪಸ್​​ ಬಂದು ತಮ್ಮದೇ ಆದ ಹೋಟೆಲ್​ ಬಿಸಿನೆಸ್​ ಅನ್ನು ಆರಂಭಿಸಿದ್ದರು. ಆಗಸ್ಟ್​ 13ರಂದು ಜ್ವರ ಕಾಣಿಸಿಕೊಂಡಿದ್ದ ಕಾರಣ ಅಮರ್​ ಕೆ.ಪಿ. ಅಗ್ರಹಾರದಲ್ಲಿರುವ ಭಾಗ್ಯ ಕ್ಲಿನಿಕ್​ಗೆ ತೆರಳಿ ಇಂಜೆಕ್ಷನ್​ ಪಡೆದಿದ್ದರು.

ಇಂಜೆಕ್ಷನ್​ ಅಡ್ಡಪರಿಣಾಮದಿಂದ ಯುವಕನಿಗೆ ಜ್ವರ ಇಳೊದಿರಲಿಲ್ಲ. ತಕ್ಷಣವೇ ಅವರನ್ನು ಕಿಮ್ಸ್​ ಆಸ್ಪತ್ರೆಗೆ ದಾಖಲಿಸಲಾಗಿದೆ. ರೋಗಿಯನ್ನು ದಾಖಲಿಸಿಕೊಂಡ ವೈದ್ಯರು ಪರೀಕ್ಷೆ ನಡೆಸಿ ಇಂಜೆಕ್ಷನ್​ ಅಡ್ಡಪರಿಣಾಮದಿಂದ ಬಹು ಅಂಗಾಂಗ ವೈಫಲ್ಯವಾಗಿದೆ ಎಂದು ಕುಟುಂಬಸ್ಥರಿಗೆ ತಿಳಿಸಿದ್ದಾರೆ. ಅಲ್ಲದೆ ಚಕಿತ್ಸೆ ಫಲಕಾರಿಯಾಗದೆ ಅಮರ್​ ಶೆಟ್ಟಿ ಶುಕ್ರವಾರ ನಿಧನರಾಗಿದ್ದಾರೆ. ವೈದ್ಯನ ನಿರ್ಲಕ್ಷಕ್ಷ್ಯಕ್ಕೆ ಯುವಕನ ಕುಟುಂಬಸ್ಥರು ಕಿಡಿಕಾರಿದ್ದು, ಕಠಿಣ ಕ್ರಮ ಜರುಗಿಸುವಂತೆ ಆಗ್ರಹಿಸಿ ಕೆ.ಪಿ. ಅಗ್ರಹಾರ ಪೊಲೀಸ್​ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

Ads on article

Advertise in articles 1

advertising articles 2

Advertise under the article