GAMING ಜಾಹೀರಾತು, ಶಾರುಖ್‌ಗೆ ಪ್ರತಿಭಟನೆ ಬಿಸಿ
Monday, August 28, 2023
ಮುಂಬಯಿ: ಆನ್ ಲೈನ್ ಗೇಮಿಂಗ್ ಆ್ಯಪ್‌ನ ಜಾಹೀರಾತಿನಲ್ಲಿ ಕಾಣಿಸಿಕೊಂಡಿರುವ ಬಾಲಿವುಡ್ ನಟ ಶಾರುಖ್ ಖಾನ್‌ಗೆ ಪ್ರತಿಭಟನೆಯ ಬಿಸಿ ತಟ್ಟಿದೆ.
ಯುವಕರನ್ನು ಹಾದಿ ತಪ್ಪಿಸುವ ONLINE GAMING ಪ್ರಚಾರದಲ್ಲಿ ನಟನ ಪಾತ್ರವನ್ನು ಖಂಡಿಸಿ ಶಾರುಖ್ ಮನೆಯ ಮುಂದೆ ಭಾರಿ ಪ್ರತಿಭಟನೆ ನಡೆಸಲಾಯಿತು..
ಪೊಲೀಸರು ಪ್ರತಿಭಟನೆಯನ್ನು ತಡೆದು, ಹಲವರನ್ನು ಬಂಧಿಸಿ ಬಿಡುಗಡೆ ಮಾಡಿದರು. ಸದ್ಯ ಶಾರುಖ್ ಮನೆ 'ಮನ್ನತ್' ಮುಂದೆ ಪೊಲೀಸ್ ಬಿಗಿ ಭದ್ರತೆ ಮುಂದುವರಿಸಲಾಗಿದೆ. ಇತ್ತೀಚೆಗೆ ಶಾರುಖ್ ಖಾನ್ ಅವರು ಆನ್‌ಲೈನ್ ರಮ್ಮಿ ಗೇಮ್ ಪೋರ್ಟಲ್‌ನ 'ಎ23'ನ ಪ್ರಚಾರ ರಾಯಭಾರಿಯಾಗಿ ನೇಮಕಗೊಂಡಿದ್ದಾರೆ.
“ಚಲೋ ಸಾಥ್ ಖೇಲೆ'' ಎಂದು ಹೇಳುವ ಮೂಲಕ ಆನ್‌ಲೈನ್ ಗೇಮಿಂಗ್‌ಗೆ ಪ್ರಚೋದಿಸುವ ಜಾಹೀರಾತಿನಲ್ಲಿ ಶಾರುಖ್ ಕಾಣಿಸಿಕೊಂಡಿದ್ದಾರೆ. “ಅನ್ ಟಚ್ ಯೂಥ್ ಫೌಂಡೇಷನ್' ವತಿಯಿಂದ ಈ ಪ್ರತಿಭಟನೆ ನಡೆಸಲಾಯಿತು.