-->
ವಾಟ್ಸಪ್ , ಫೇಸ್ ಬುಕ್ ನಲ್ಲಿ ಹುಡುಗಿಯರಿಗೆ ಕೆಂಪು ಹಾರ್ಟ್ ಇಮೋಜಿ ಕಳುಹಿಸಿದರೆ ಶಿಕ್ಷೆ ಗ್ಯಾರಂಟಿ!

ವಾಟ್ಸಪ್ , ಫೇಸ್ ಬುಕ್ ನಲ್ಲಿ ಹುಡುಗಿಯರಿಗೆ ಕೆಂಪು ಹಾರ್ಟ್ ಇಮೋಜಿ ಕಳುಹಿಸಿದರೆ ಶಿಕ್ಷೆ ಗ್ಯಾರಂಟಿ!


ಕೆಂಪು ಬಣ್ಣದ ಹಾರ್ಟ್ ಸಿಂಬಲ್ ಕಳುಹಿಸಿದವರಿಗೆ ಜೈಲು ಶಿಕ್ಷೆ ಗ್ಯಾರಂಟಿ. ಇಂತಹ ಕಠಿಣವಾದ ಕಾನೂನು ಕುವೈತ್‌ನಲ್ಲಿ ಜಾರಿ ಆಗ್ತಿದೆ.
 
 ಯಾರಾದರೂ ಸೋಷಿಯಲ್ ಮೀಡಿಯಾದಲ್ಲಿ ಹುಡುಗಿಯರಿಗೆ ಹಾರ್ಟ್‌ ಸಿಂಬಲ್ ಕಳುಹಿಸಿದ್ರೆ ಎರಡು ವರ್ಷ ಜೈಲು ಶಿಕ್ಷೆಗೆ ಗುರಿಯಾಗಲಿದ್ದಾರೆ. ಅಷ್ಟೇ ಅಲ್ಲ ದಂಡವನ್ನೂ ಕಟ್ಟಬೇಕಾಗಿದೆ. ಇಂತಹದೊಂದು ಕಾನೂನನ್ನು ಕುವೈತ್ ಸರ್ಕಾರ ಜಾರಿಗೆ ತಂದಿದೆ. 
 
ಸೌದಿ ಅರೇಬಿಯಾದಲ್ಲೂ ಕೂಡ ಈ ರೀತಿಯ ನಡವಳಿಕೆಯನ್ನು ಅಪರಾಧ ಎಂದು ಪರಿಗಣಿಸಲಾಗುತ್ತಿದೆ. ಕುವೈತ್ ಮತ್ತು ಸೌದಿ ಅರೇಬಿಯಾಗಳಲ್ಲಿ ಇನ್ಮುಂದೆ ಹುಡುಗಿಯರಿಗೆ ಯಾರೂ ಹಾರ್ಟ್‌ ಎಮೋಜಿಗಳನ್ನು ಕಳಿಸುವಂತಿಲ್ಲ. ಪ್ರಮುಖ ಸೋಷಿಯಲ್ ಮೀಡಿಯಾಗಳಾದ ವಾಟ್ಸಾಪ್‌, ಫೇಸ್‌ಬುಕ್‌ಗಳಲ್ಲಿ ಹುಡುಗಿಯರಿಗೆ ಹಾರ್ಟ್‌ ಸಿಂಬಲ್ ಕಳುಹಿಸಿದ್ರೆ ಅಪರಾಧವೆಂದು ಪರಿಗಣಿಸಲಾಗುತ್ತಿದೆ. ಕುವೈತ್‌ನಲ್ಲಿ ಈ ರೀತಿಯ ಹೃದಯದ ಎಮೋಜಿಯನ್ನು ಕಳುಹಿಸಿದರೆ ಎರಡು ವರ್ಷಗಳವರೆಗೆ ಜೈಲು ಶಿಕ್ಷೆ ಮತ್ತು 2 ಸಾವಿರ ಕುವೈತ್ ದಿನಾರ್‌ಗಳ ದಂಡ ಕಟ್ಟಬೇಕಾಗಿದೆ.



ಸೌದಿ ಅರೇಬಿಯಾದಲ್ಲಿ ಈ ಕಾನೂನು ಮತ್ತಷ್ಟು ಕಠಿಣವಾಗಿದೆ. ಸೋಷಿಯಲ್ ಮೀಡಿಯಾದಲ್ಲಿ ಹುಡುಗಿಯರಿಗೆ ಹಾರ್ಟ್ ಸಿಂಬಲ್ ಕಳುಹಿಸಿದರೆ ಎರಡರಿಂದ ಐದು ವರ್ಷಗಳವರೆಗೆ ಜೈಲು ಶಿಕ್ಷೆ ವಿಧಿಸಬಹುದು. ಇದರ ಜೊತೆ ಒಂದು ಲಕ್ಷ ಸೌದಿ ರಿಯಾಲ್‌ಗಳನ್ನು ದಂಡವಾಗಿ ಕಟ್ಟಬೇಕಾಗುತ್ತದೆ. ಸೌದಿ ಅರೇಬಿಯಾದ ವಂಚನೆಯ ವಿರೋಧಿ ಸಂಘದ ಸದಸ್ಯ ಈ ಮಾಹಿತಿಯನ್ನು ಬಹಿರಂಗ ಪಡಿಸಿದ್ದಾರೆ. 

ಈ ದೇಶದಲ್ಲಿ ಆನ್‌ಲೈನ್‌ ಚಾಟಿಂಗ್‌ನಲ್ಲಿ ಯಾರಾದ್ರೂ ಹಾರ್ಟ್‌ ಎಮೋಜಿಗಳನ್ನು ಕಳುಹಿಸಿದ್ರೆ ಕಾನೂನು ಕ್ರಮ ಕೈಗೊಳ್ಳಲಾಗುವುದು. ಮೆಸೇಜ್ ಕಳುಹಿಸುವವರ ವಿರುದ್ಧ ಹುಡುಗಿಯರು ದೂರು ನೀಡಿದರೆ ಅದನ್ನು ಕಿರುಕುಳದ ಅಪರಾಧ ಎಂದು ಪರಿಗಣಿಸಲಾಗುತ್ತದೆ. ಇದೇ ರೀತಿಯ ಪ್ರಕರಣ ಪದೇ ಪದೆ ಮರುಕಳಿಸಿದರೆ ಅಪರಾಧಿಗೆ ಐದು ವರ್ಷ ಜೈಲು ಶಿಕ್ಷೆ, ಮೂರು ಲಕ್ಷ ಸೌದಿ ರಿಯಾಲ್‌ಗಳನ್ನು ದಂಡವಾಗಿ ಕಟ್ಟಬೇಕಾಗುತ್ತದೆ.

Ads on article

Advertise in articles 1

advertising articles 2

Advertise under the article