'KISS ಕೊಡಲು ರಾಹುಲ್‌ಗೆ ಬೇಕಾದಷ್ಟು ಹುಡುಗಿಯರಿದ್ದಾರೆ'!-ಕಾಂಗ್ರೆಸ್ ಶಾಸಕಿಯ ವಿವಾದಿತ ಹೇಳಿಕೆ VIDEO
Saturday, August 12, 2023
ಪಟನಾ: ಲೋಕಸಭೆಯಲ್ಲಿ ಬಿಜೆಪಿ ಮಹಿಳಾ ಸಂಸದರತ್ತ ಪ್ಲೆಯಿಂಗ್ ಕಿಸ್ ಮಾಡಿದ್ದ ರಾಹುಲ್ ಗಾಂಧಿ ಸಮರ್ಥನೆ ಮಾಡಿಕೊಳ್ಳುವ ಭರದಲ್ಲಿ ಬಿಹಾರ ಕಾಂಗ್ರೆಸ್ ಶಾಸಕಿ ನೀತು ಸಿಂಗ್ ವಿವಾದಿತ ಹೇಳಿಕೆ ನೀಡಿ ಕೆಂಗಣ್ಣಿಗೆ ಗುರಿಯಾಗಿದ್ದಾರೆ.
“ರಾಹುಲ್ ಗಾಂಧಿ ಅವರು ಇಷ್ಟಪಟ್ಟರೆ ಕಿಸ್ ಮಾಡಲು ಹುಡುಗಿಯರಿಗೆ ಬರವಿಲ್ಲ. ಅವರು ಕಿಸ್ ಮಾಡಬೇಕು ಎಂದುಕೊಂಡರೆ ಹದಿ ಹರೆಯದ ಹುಡುಗಿಯರಿಗೆ ಕಿಸ್ ಮಾಡುತ್ತಾರೆ. ಅದನ್ನು ಬಿಟ್ಟು 50 ವರ್ಷದ ದಾಟಿದ ಆಂಟಿಗೆ (ಸ್ಮೃತಿ ಇರಾನಿ) ಮುತ್ತು ಕೊಡಲು ಅವರೇನು ಬರಗೆಟ್ಟಿದ್ದಾರಾ?,'' ಎಂದು ಶಾಸಕಿ ನೀತು ಸಿಂಗ್ ಅವರು ರಾಹುಲ್ ಗಾಂಧಿ ವರ್ತನೆಯನ್ನು ಸಮರ್ಥನೆ ಮಾಡಿಕೊಂಡಿದ್ದಾರೆ.
''ಸಂಸತ್‌ನಲ್ಲಿ ಮಹಿಳೆಯರಿಗೆ ಫೈಯಿಂಗ್ ಕಿಸ್ ಕೊಡುವ ಮೂಲಕ ರಾಹುಲ್ ಗಾಂಧಿ ಅವರು ಸಂಸತ್ ಘನತೆಗೆ ಕುಂದು ತಂದಿದ್ದಾರೆ ಎಂಬ ಬಿಜೆಪಿ ಆರೋಪದಲ್ಲಿ ಹುರುಳಿಲ್ಲ'' ಎಂದು ನೀತು ಸಿಂಗ್ ಹೇಳಿದ್ದಾರೆ.