ಸುಳ್ಯದಲ್ಲಿ ನೈತಿಕ ಪೊಲೀಸ್ ಗಿರಿ-ಯುವತಿಗೆ LODGE ನಲ್ಲಿ ರೂಂ ಕೊಡಿಸಿದ್ದೆ ತಪ್ಪಾಯ್ತು!
Sunday, August 13, 2023
ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನೈತಿಕ ಪೊಲೀಸ್ ಗಿರಿ ಪ್ರಕರಣ ದಿನೆ ದಿನೇ ಹೆಚ್ಚುತ್ತಿದ್ದು ಇದೀಗ ಸುಳ್ಯದಲ್ಲಿ ನಡೆದ ಬಗ್ಗೆ ನಡೆದಿದೆ.
ಕೇರಳ ಮಲಪುರಂ ನಿವಾಸಿ ಮೊಹಮ್ಮದ್ ಜಲೀಲ್(39ವರ್ಷ) ಅವರು ಪ್ರಸ್ತುತ ಸುಳ್ಯ ತಾಲೂಕು ಅರಂತೋಡಿನಲ್ಲಿ ರಬ್ಬರ್ ತೋಟವನ್ನು ಕಳೆದ 3 ತಿಂಗಳ ಹಿಂದೆ ಗುತ್ತಿಗೆ ಪಡೆದು ಅರಂತೋಡಿನಲ್ಲಿ ವಾಸವಾಗಿದ್ದಾರೆ. ಆಗಷ್ಟ್ 12ರಂದು ತನ್ನ ಪರಿಚಯದ ಯುವತಿಯೋರ್ವಳು ತಾನು ಮಡಿಕೇರಿಯಿಂದ ಸುಳ್ಯ ಕಡೆಗೆ ಬರುತ್ತಿದ್ದು ತನಗೆ ವಿಶ್ರಾಂತಿ ಪಡೆಯಲು ರೂಮ್ ಬೇಕೆಂದು ಕೇಳಿಕೊಂಡ ಮೇರೆಗೆ ಇವರು ಸುಳ್ಯದಲ್ಲಿ ರೂಂ ವ್ಯವಸ್ಥೆ ಮಾಡಿ ಬಳಿಕ ವೈಯಕ್ತಿಕ ಕೆಲಸ ನಿಮಿತ್ತ ಸುಳ್ಯ ತಾಲೂಕು ತೋಡಿಕಾನಕ್ಕೆ ತೆರಳಿದ್ದಾಗ ಈ ಘಟನೆ ನಡೆದಿದೆ.
5 ಜನ ಆರೋಪಿಗಳು ಕಾರು ಮತ್ತು ಸ್ಕೂಟರ್ ಮೂಲಕ ಇವರ ಕಾರನ್ನು ತಡೆದು ಅವ್ಯಾಚವಾಗಿ ಬೈದು ಕೈಯಿಂದ ಹಲ್ಲೆ ನಡೆಸಿ ಜೀವಬೆದರಿಕೆ ಹಾಕಿ ತೆರಳಿದ್ದಾರೆ. ಆರೋಪಿಗಳ ಪೈಕಿ ಮೂವರ ಹೆಸರು ಲತೀಶ್ ಗುಂಡ್ಯ, ವರ್ಷಿತ್ ಹಾಗೂ ಪುನೀತ್ ಎಂಬುದಾಗಿ ಹಲ್ಲೆಯ ನಡೆಯುತ್ತಿದ್ದಾಗ ಇವರಿಗೆ ತಿಳಿದುಬಂದಿದೆ. ಮತ್ತಿಬ್ವರ ಆರೋಪಿಗಳ ಪರಿಚಯ ಇವರಿಗೆ ಇರುವುದಿಲ್ಲ.
ಇವರ ದೂರಿನ ಮೇರೆಗೆ ಸುಳ್ಯ ಪೊಲೀಸ್ ಠಾಣೆಯಲ್ಲಿ ಅ.ಕ್ರ 87/2023 ಕಲಂ 143, 147, 341, 323, 504, 506, 153(A) ಜೊತೆಗೆ 149 ಐಪಿಸಿ ಯಂತೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗಿ ಆರೋಪಿಗಳ ಪೈಕಿ ಸುಳ್ಯ ಸೊಣಂಗೇರಿ ನಿವಾಸಿ ಪುನೀತ್ ಎಂಬಾತನನ್ನು ಬಂಧಿಸಿದ್ದು, ತನಿಖೆ ಪ್ರಗತಿಯಲ್ಲಿದೆ.