
ಮಹೀಂದ್ರಾ ಸಕ್ಷಮ್ ಸ್ಕಾಲರ್‌ಶಿಪ್: ಚಾಲಕರ ಮಕ್ಕಳಿಗೆ ಸಿಗಲಿದೆ ವಿದ್ಯಾರ್ಥಿ ವೇತನ
ಮಹೀಂದ್ರಾ ಸಕ್ಷಮ್ ಸ್ಕಾಲರ್‌ಶಿಪ್: ಚಾಲಕರ ಮಕ್ಕಳಿಗೆ ಸಿಗಲಿದೆ ವಿದ್ಯಾರ್ಥಿ ವೇತನ
ಕರ್ನಾಟಕ ಸಹಿತ ದಕ್ಷಿಣ ಭಾರತದ ಲಘು ವಾಹನ ಚಾಲಕರ ಮಕ್ಕಳಿಗೆ ವಿದ್ಯಾರ್ಥಿ ವೇತನ ನೀಡುವ ಸಕ್ಷಮ್ ಸ್ಕಾಲರ್‌ಶಿಪ್ ಯೋಜನೆ ರೂಪಿಸಲಾಗಿದೆ.
ಕರ್ನಾಟಕ, ಆಂಧ್ರ ಪ್ರದೇಶ, ತಮಿಳುನಾಡು ಮತ್ತು ತೆಲಂಗಾಣ ರಾಜ್ಯಕ್ಕೆ ಸೇರಿದ ಚಾಲಕರ ಮಕ್ಕಳು ಈ ವಿದ್ಯಾರ್ಥಿ ವೇತನಕ್ಕೆ ಅರ್ಹರಾಗಿದ್ದಾರೆ.
ಪರವಾನಿಗೆ ಹೊಂದಿರುವ ಎಲ್ಲ ಲಘು ವಾಹನಗಳ ಚಾಲಕರ ಮಕ್ಕಳಿಗೆ ಆರ್ಥಿಕವಾಗಿ ಬೆಂಬಲ ನೀಡುವುದಕ್ಕಾಗಿ ಮಹೀಂದ್ರಾ ಕಂಪೆನಿ ಈ ಸ್ಕಾಲರ್‌ಶಿಪ್ ಯೋಜನೆಯನ್ನು ಜಾರಿಗೆ ತಂದಿದೆ.
ಟ್ಯಾಕ್ಸಿ, ಜೀಪ್, ಕಾರು, ಪಿಕ್‌ಅಪ್, ಮ್ಯಾಜಿಕ್, ಡೆಲಿವರಿ ವ್ಯಾನ್ ಮತ್ತು ಸ್ಕೂಲ್ ವ್ಯಾನ್ ಇತ್ಯಾದಿ ಲಘು ಮೋಟಾರು ವಾಹನದ ಲೈಸನ್ಸ್ ಹೊಂದಿರುವ ಚಾಲಕರು ಈ ಯೋಜನೆಯಲ್ಲಿ ತಮ್ಮ ಮಕ್ಕಳ ಸ್ಕಾಲರ್‌ಶಿಪ್‌ಗೆ ಅರ್ಜಿ ಸಲ್ಲಿಸಬಹುದು.
ಅರ್ಹತೆ: ಕರ್ನಾಟಕ, ಆಂಧ್ರ ಪ್ರದೇಶ, ತಮಿಳುನಾಡು ಮತ್ತು ತೆಲಂಗಾಣ ರಾಜ್ಯಕ್ಕೆ ಸೇರಿದವರಾಗಿರಬೇಕು.
ಒಂದನೇ ತರಗತಿಯಿಂದ ಸ್ನಾತಕೋತ್ತರ ಪದವಿ ಹಂತದ ವರೆಗೆ ಓದುತ್ತಿರುವ ವಿದ್ಯಾರ್ಥಿಗಳು ಸ್ಕಾಲರ್‌ಶಿಪ್‌ಗಾಗಿ ಅರ್ಜಿ ಸಲ್ಲಿಸಬಹುದು.
9 ಮತ್ತು ಅದಕ್ಕಿಂತ ಹೆಚ್ಚಿನ ತರಗತಿಗಳಲ್ಲಿ ಅಧ್ಯಯನ ಮಾಡುತ್ತಿರುವ ಅಭ್ಯರ್ಥಿಗಳು ತಮ್ಮ ಹಿಂದಿನ ವರ್ಷದ ತರಗತಿಯಲ್ಲಿ ಶೇ. 60 ಅಥವಾ ಅದಕ್ಕಿಂತ ಹೆಚ್ಚಿನ ಅಂಕಗಳನ್ನು ಗಳಿಸಿರಬೇಕು.
ಅರ್ಜಿದಾರರ ಕುಟುಂಬದ ವಾರ್ಷಿಕ ಆದಾಯವು ಎಲ್ಲಾ ಮೂಲಗಳಿಂದ 3 ಲಕ್ಷ ರೂ.ಗಳನ್ನು ಮೀರಿರಬಾರದು.
ಪೋಷಕರಲ್ಲಿ ಒಬ್ಬರು ಚಾಲಕರಾಗಿರಬೇಕು ಮತ್ತು ಚಾಲನಾ ಪರವಾನಗಿ ಹೊಂದಿರಬೇಕು.
ಆರ್ಥಿಕ ನೆರವು: ವರ್ಷಕ್ಕೆ 5 ಸಾವಿರ ರೂ.ಗಳಿಂದ 20 ಸಾವಿರ ರೂ.ಗಳ ವರೆಗೆ ವಿದ್ಯಾರ್ಥಿ ವೇತನ ಲಭ್ಯವಾಗಲಿದೆ.
ಆನ್‌ಲೈನ್‌ನಲ್ಲಿ ಅರ್ಜಿಗಳನ್ನು ಸಲ್ಲಿಸಬೇಕು.
ಹೆಚ್ಚಿನ ಮಾಹಿತಿಗೆ: www.b4s.in/praja/SKSPS
ಆಥವಾ ಈ ಲಿಂಕ್ ಕ್ಲಿಕ್ ಮಾಡಬಹುದು.
https://www.buddy4study.com/page/saksham-scholarship-program-for-drivers-children?ref=FeaturedRightBlock