Mangalore- LOAN APP ನಲ್ಲಿ ಸಾಲ ಮಾಡಿದ ಮಹಿಳೆಗೆ ನಗ್ನ ಪೊಟೋ ವೈರಲ್ ಮಾಡುವ ಬೆದರಿಕೆ !
Friday, August 25, 2023
ಮಂಗಳೂರು: LOAN APP ನಲ್ಲಿ ಸಾಲ ಪಡೆದ ಮಹಿಳೆಯೋರ್ವರಿಗೆ ಸಾಲವನ್ನು ಮರುಪಾವತಿಸಿದ ಬಳಿಕವೂ ಹೆಚ್ಚಿನ ಹಣ ಪಾವತಿಸಲು ಒತ್ತಾಯಿಸಿ ನಗ್ನ ಪೊಟೋ ಹರಿಬಿಡುವ ಬೆದರಿಕೆಯನ್ನು ಹಾಕಲಾಗಿದೆ.
ಎಪ್ರಿಲ್ 15 ರಂದು ಮಹಿಳೆ ಗೂಗಲ್ ಪ್ಲೇ ಸ್ಟೋರ್ ನಿಂದ quick money ಎಂಬ LOAN APP ನ್ನು ಡೌನ್ ಲೋಡ್ ಮಾಡಿ ಲೋನ್ ಆಪ್ ನಲ್ಲಿ ರೂ. 10000/- ಸಾಲಗೆ ಅಪ್ಲೈ ಮಾಡಿದ್ದರು. ಕೂಡಲೇ ಅವರ ಖಾತೆಗೆ ರೂ 7500/- ಕ್ರೆಡಿಟ್ ಆಗಿದೆ. ಮಹಿಳೆ ಸ್ವಲ್ಪ ದಿನಗಳ ನಂತರ 10000/- ವನ್ನು ಮರು ಪಾವತಿ ಮಾಡಿದ್ದರು.
ನಂತರದ ದಿನಗಳಲ್ಲಿ +8801917876737, +923175117514, +8801725434777, +8801794519568, +8801701800798, +8801631841539, +8801637686607 ಎಂಬ ವಾಟ್ಸಪ್ ನಂಬ್ರದಿಂದ ಮಹಿಳೆಗೆ ಕಡ್ಡಾಯವಾಗಿ ಪುನಃ ಲೋನನ್ನು ಪಡೆಯಬೇಕೆಂದು ಒತ್ತಾಯಿಸಿ ಅವರ ಖಾತೆಗೆ ರೂ 14 ಸಾವಿರ ವ ನ್ನು ಕ್ರೆಡಿಟ್ ಮಾಡಿದ್ದಾರೆ. ಈ ಹಣವನ್ನು ಮಹಿಳೆ ಮರು ಪಾವತಿ ಮಾಡಿರುತ್ತಾರೆ .
ಎಲ್ಲಾ ಹಣವನ್ನು ಪಾವತಿಸಿದ ಬಳಿಕವು ವಿವಿಧ ಮೊಬೈಲ್ ನಂಬ್ರಗಳಿಂದ ಮಹಿಳೆಗೆ ಕರೆ ಮಾಡಿ ಹೆಚ್ಚಿನ ಹಣವನ್ನು ಪಾವತಿ ಮಾಡುವಂತೆ ಒತ್ತಾಯಿಸಿ ರೂ.51 ಸಾವಿರವ ನ್ನು ತಮ್ಮ ಖಾತೆಗೆ ವರ್ಗಾಯಿಸಿರುತ್ತಾರೆ. ನಂತರದ ದಿನಗಳಲ್ಲಿ ಮಹಿಳೆಗೆ ಬೇರೆ ಬೇರೆ ನಂಬ್ರಗಳಿಂದ ಕರೆ ಮಾಡಿ ಹಣವನ್ನು ಹಿಂತಿರುಗಿಸುವಂತೆ ಬೆದರಿಕೆ ಹಾಕಿ ಮಹಿಳೆಯ ಫೋಟೋವನ್ನು ಹುಡುಗನೊಂದಿಗೆ ನಗ್ನವಾಗಿ ಇರುವಂತೆ ಎಡಿಟ್ ಮಾಡಿ ಮಹಿಳೆಗೆ ಕಳುಹಿಸಿ ಇತರರಿಗೆ ಹಾಗೂ ಸಂಬಂಧಿಕರಿಗೆ ಕಳುಹಿಸುವುದಾಗಿಯೂ ಸಾಮಾಜಿಕ ಜಾಲತಾಣದಲ್ಲಿ ಅಪ್ ಲೋಡ್ ಮಾಡುವುದಾಗಿಯೂ ಬೆದರಿಕೆ ಹಾಕಿದ್ದಾರೆ. ಈ ಬಗ್ಗೆ ಮಹಿಳೆ ಸೆನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.