Mangalore- ನಡು ರಸ್ತೆಯಲ್ಲಿ ದಾಂಧಲೆ... ಸಿನಿಮಿಯ ಶೈಲಿಯಲ್ಲಿ ಲಾಕ್ ಮಾಡಿದ ಪೊಲೀಸರು... Video ವೈರಲ್
Monday, August 21, 2023
ಮಂಗಳೂರು: ಅಮಲು ಪದಾರ್ಥ ಸೇವಿಸಿದ ನಶೆಯಲ್ಲಿ ತೇಲುತ್ತಿದ್ದ ಯುವಕನೊಬ್ಬ ಯುನಿವರ್ಸಿಟಿ ರಸ್ತೆಯ ನಾಟೆಕಲ್ ರಸ್ತೆ ಡಿವೈ ಡರ್‌ನಲ್ಲಿ ದಾಂಧಲೆ ನಡೆಸುತ್ತಿದ್ದ ವೇಳೆ ಅಲ್ಲಿಗೆ ಬಂದ ಕೊಣಾ ಜೆ ಪೊಲೀಸರು ಯುವಕನನ್ನು ಸಿನಿಮೀಯ ರೀತಿಯಲ್ಲಿ ಲಾಕ್ ಮಾಡಿ ಜೈಲಿಗಟ್ಟಿದ್ದಾರೆ.
ಉಳ್ಳಾಲ ಮುಕ್ಕಚ್ಚೇರಿ ಕೈಕೋ ರೋಡ್ ನಿವಾಸಿ ಅಬೂಬಕ್ಕರ್ ಸಿದ್ದೀಕ್ (24) ಬಂಧಿತ ಯುವಕ. ಶನಿವಾರ ಅಮಲು ಪದಾರ್ಥ ಸೇವಿಸಿ ನಶೆಯಲ್ಲಿದ್ದ ಸಿದ್ದಿಕ್ ನಾಟೆಕಲ್ ಜಂಕ್ಷನ್‌ನಲ್ಲಿ ರಸ್ತೆ ಮಧ್ಯೆ ಚೂರಿ ಹಿಡಿದು ದಾಂಧಲೆ ನಡೆಸುತ್ತಿದ್ದ.
ಮಾಹಿತಿ ಪಡೆದ ಕೊಣಾಜೆ ಮತ್ತು ಟ್ರಾಫಿಕ್ ಪೊಲೀಸರು ಕಾರ್ಯಾಚರಣೆ ನಡೆಸಿ ಸಿನಿಮೀಯ ರೀತಿಯಲ್ಲಿ ಸಿದ್ದೀಕ್‌ನನ್ನು ಲಾಕ್ ಮಾಡಿ ಪೊಲೀಸ್ ವಾಹನಕ್ಕೆ ತಳ್ಳಿ ದ್ದಾರೆ. ಕೊಣಾಜೆ ಠಾಣೆಯ ಪೊಲೀಸ್ ಸಿಬ್ಬಂದಿ, ಮಾಜಿ ಯೋಧ ಸಂತೋಷ್ ಚಾಣಾಕ್ಷತನದಿಂದ ಸಿದ್ದೀಕ್‌ನನ್ನು ಲಾಕ್ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸಿ ದ್ದಾರೆ.
ಪೊಲೀಸ್ ಕಾರ್ಯಾಚರಣೆ ಮೊಬೈಲಲ್ಲಿ ರೆಕಾರ್ಡ್ ಮಾಡಿದ್ದು ವಿಡಿಯೊ ತುಣುಕು ಜಾಲ ತಾಣಗಳಲ್ಲಿ ಹರಿದಾಡುತ್ತಿದೆ. ಆರೋಪಿ ಅಬೂಬಕ್ಕರ್ ಸಿದ್ದೀಕ್ ನನ್ನು ವೈದ್ಯಕೀಯ ಪರೀಕ್ಷೆಗೊಳಪಡಿಸಿದ್ದು ಅಮಲು ಪದಾರ್ಥ ಸೇವಿಸಿದ್ದು ದೃಢಪಟ್ಟ ಮೇಲೆ ಪ್ರಕರಣ ದಾಖಲಿಸಲಾಗಿದೆ.