Mangalore- ನಿವೃತ್ತ ಯೋಧನಿಂದ ಮಹಿಳಾ ಪೊಲೀಸ್ ಗೆ ಲೈಂಗಿಕ ಕಿರುಕುಳ
Wednesday, August 2, 2023
ಉಳ್ಳಾಲ: ಮಹಿಳಾ ಪೊಲೀಸ್ ಗೆ ನಿವೃತ್ತ ಯೋಧನೊಬ್ಬ ಲೈಂಗಿಕ ಕಿರುಕುಳ ನೀಡಿದ್ದು ಆರೋಪಿಯನ್ನು ಉಳ್ಳಾಲ ಪೊಲೀಸರ ವಶಕ್ಕೆ ಒಪ್ಪಿಸಲಾಗಿದ್ದು ಪ್ರಕರಣ ದಾಖಲಾಗಿದೆ.
ಕೊಲ್ಯ ಕನೀರುತೋಟ ನಿವಾಸಿ, ಸದ್ಯ ಕುಂಪಲ ಅಮೃತನಗರದಲ್ಲಿ ಬಾಡಿಗೆ ಮನೆಯಲ್ಲಿ ವಾಸಿಸುವ ನಿವೃತ್ತ ಯೋಧ ಪ್ರಶಾಂತ್ (45) ಕಿರುಕುಳ ನೀಡಿದ ಆರೋಪಿ. ಮಹಿಳಾ ಪೊಲೀಸ್ ಸ್ಕೂಟರ್ ನಲ್ಲಿ ಕರ್ತವ್ಯಕ್ಕೆ ತೆರಳುತ್ತಿದ್ದ ಸಂದರ್ಭ ಅಡ್ಡಗಟ್ಟಿ ಲೈಂಗಿಕ ಕಿರುಕುಳ ನೀಡಿದ್ದಾನೆ ಎಂದು ಆರೋಪಿಸಲಾಗಿದೆ.
ಮಹಿಳಾ ಪೊಲೀಸ್ ಬೊಬ್ಬಿಟ್ಟಾಗ ಸ್ಥಳೀಯರು ಜಮಾಯಿಸಿ ನಿವೃತ್ತ ಯೋಧನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.
ಹಲವು ಪ್ರಕರಣಗಳು: ಉಳ್ಳಾಲ ಪೊಲೀಸ್ ಠಾಣೆಯಲ್ಲಿ ನಿವೃತ್ತ ಯೋಧ ಪ್ರಶಾಂತ್ ವಿರುದ್ಧ ಹಲವರು ದೂರು ನೀಡಿ ಪ್ರಕರಣಗಳು ವಿಚಾರಣೆ ಹಂತದಲ್ಲಿದೆ. ಪೊಲೀಸರಿಗೂ ಹಲ್ಲೆ ನಡೆಸಿರುವ ಈತನ ವಿರುದ್ಧ ಹೊಸದಿಲ್ಲಿ ಯೋಧರ ಅಸೋಸಿಯೇಶನ್‌ನಲ್ಲಿಯೂ ಎರಡು ದೂರುಗಳು ವಿಚಾರಣಾ ಹಂತದಲ್ಲಿದೆ ಎಂಬ ಮಾಹಿತಿ ಲಭ್ಯವಾಗಿದ್ದು ಉಳ್ಳಾಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.