MANGALORE- ಪತಿಗೆ ಹಾವು ಕಚ್ಚಿದ ವಿಷಯ ತಿಳಿದು ಪತ್ನಿಗೆ ಹೃದಯಾಘಾತ
Tuesday, August 8, 2023
ಮಂಗಳೂರು: ನೆಲ್ಯಾಡಿಯ ದೋಂತಿಲ ಸಮೀಪದ ತೋಟ ಎಂಬಲ್ಲಿ ಅಂಚೆ ಇಲಾಖೆಯಲ್ಲಿ ಉದ್ಯೋಗಿ ಯಾಗಿದ್ದ ಪದ್ಮಯ್ಯ ಗೌಡ ಎಂಬ ವರಿಗೆ ವಿಷದ ಹಾವೊಂದು ಕಚ್ಚಿದ್ದು, ಈ ವಿಷಯ ತಿಳಿದ ಅವರ ಪತ್ನಿಗೆ ಹೃದಯಾಘಾತವಾಗಿ ಸಾವನ್ನಪ್ಪಿದ ಘಟನೆ ನಡೆದಿದೆ.
ಪದ್ಮಯ್ಯ ಗೌಡ ಅವರನ್ನು ಮಂಗಳೂರಿನ ಆಸ್ಪತ್ರೆಗೆ ಕರೆದೊಯ್ಯ ಲಾಗಿದೆ ಎಂಬ ವಿಷಯ ತಿಳಿದು, ಅವರ ಪತ್ನಿ ಸೇಸಮ್ಮ ಯಾನೆ ಜಾನಕಿ (60) ಹೃದಯಾಘಾತದಿಂದ ಶನಿವಾರ ಮೃತಪಟ್ಟಿದ್ದಾರೆ.
ಪದ್ಮಯ ಗೌಡರಿಗೆ ಆ.5ರಂದುಬೆಳಗ್ಗೆ ಕೃಷಿ ತೋಟದಲ್ಲಿ ವಿಷದ ಹಾವೊಂದು ಕಚ್ಚಿದ್ದು, ಅವರನ್ನು ಮಂಗಳೂರಿಗೆ ಕರೆದೊಯ್ಯ ಲಾಗಿತ್ತು. ಈ ವಿಷಯ ತಿಳಿದ ಅವರ ಪತ್ನಿ ಸೇಸಮ್ಮ ತಮ್ಮ ಆಘಾತಗೊಂಡು ಹಾರ್ಟ್ ಅಟ್ಯಾಕ್ ನಿಂದ
ಮೃತಪಟ್ಟರು. ಇದೀಗ ಪದ್ಮಯ ಗೌಡ ಅವರು ಆಸ್ಪತ್ರೆಯಲ್ಲಿ
ಚೇತರಿಸಿ ಕೊಂಡಿದ್ದಾರೆ ಎಂದು ತಿಳಿದುಬಂದಿದೆ. ಮೃತ ಸೇಸಮ್ಮ ಅವರಿಗೆ ಪತಿ, ಇಬ್ಬರು ಪುತ್ರರು, ಒಬ್ಬ ಪುತ್ರಿ ಇದ್ದಾರೆ.