ಹರಹರ ಶಂಭೋ ಗೀತೆ ಹಾಡನ್ನು ಹಾಡಿ ಪ್ರಖ್ಯಾತರಾದ ಫರ್ಮಾನಿ ನಾಜ್ ಸಹೋದರ ಬರ್ಬರ ಹತ್ಯೆ
Tuesday, August 8, 2023
ಲಖನೌ: ಹರ ಹರ ಶಂಭು ಗೀತೆಯನ್ನು ಸುಮಧುರವಾಗಿ ಹಾಡುವ ಮೂಲಕ ಸಾಮಾಜಿಕ ಜಾಲತಾಣದಲ್ಲಿ ಎಲ್ಲರನ್ನು ಗಮನಸೆಳೆದಿರುವ ಉತ್ತರಪ್ರದೇಶದ ಖ್ಯಾತ ಯೂಟ್ಯೂಬ್ ಗಾಯಕಿ ಫರ್ಮಾನಿ ನಾಜ್ ಸೋದರ ಸಂಬಂಧಿಯನ್ನು ಬರ್ಬರವಾಗಿ ಹತ್ಯೆ ಮಾಡಲಾಗಿದೆ.
ಖುರ್ಷಿದ್ (18) ಹತ್ಯೆಯಾದ ನಾಜ್ ಸಹೋದರ. ಈ ದುರ್ಘಟನೆ ಮುಜಾಫರ್ನಗರದ ಮೊಹಮ್ಮದ್ಪುರ ಮಾಫಿ ಗ್ರಾಮದಲ್ಲಿ ನಡೆದಿದೆ. ಖುರ್ಷಿದ್, ಮಸೀದಿಯಲ್ಲಿ ಪ್ರಾರ್ಥನೆ ಸಲ್ಲಿಸಿ ಹಿಂದಿರುಗುವಾಗ ಕೆಲ ಅಪರಿಚಿತ ದುಷ್ಕರ್ಮಿಗಳು ಚಾಕುವಿನಿಂದ ಇರಿದು ಬರ್ಬರವಾಗಿ ಹತ್ಯೆ ಮಾಡಿದ್ದಾರೆ.
ಸಾಲ್ವಾ ರಸ್ತೆ ಬಳಿ ಕೆಲವು ಬೈಕ್ ಸವಾರರು ಖುರ್ಷಿದ್ ರನ್ನು ಸುತ್ತುವರಿದು ಮಾರಕಾಯುಧವನ್ನು ತೋರಿಸಿದ್ದಾರೆ. ಖುರ್ಷಿದ್ ವಿರುದ್ಧ ಯಾವುದೇ ಪ್ರಚೋದನೆ ಇಲ್ಲದಿದ್ದರೂ ಆತನಿಗೆ ಚಾಕುವಿನಿಂದ ಇರಿದ ಬಳಿಕ ಆ ಗ್ಯಾಂಗ್ ಸ್ಥಳದಿಂದ ಪರಾರಿಯಾಗಿದೆ. ತಕ್ಷಣ ಅವರನ್ನು ಆಸ್ಪತ್ರೆಗೆ ಸಾಗಿಸಲಾಯಿತಾದರೂ ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾರೆ.
ಈ ಘಟನೆ ಸಂಬಂಧ ರತನಪುರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ವಿವರವಾದ ತನಿಖೆ ನಡೆಯುತ್ತಿದೆ.