ಅಕ್ರಮ ಸಂಬಂಧ ಇಟ್ಕೊಂಡಿದ್ದ ಸ್ನೇಹಿತನ ಪತ್ನಿಯನ್ನೇ ಹತ್ಯೆಗೈದ ಕಿರಾತಕ: ಎಣ್ಣೆಪಾರ್ಟಿಗೆಂದು ಬಂದು ಮಿತ್ರದೋಹ
Thursday, August 24, 2023
ಚೆನ್ನೈ: ಸ್ನೇಹಿತನ ಪತ್ನಿಯೊಂದಿಗೆ ಅಕ್ರಮ ಸಂಬಂಧ ಇಟ್ಕೊಂಡ ಕಿರಾತಕನೋರ್ವನು ಆಕೆಯನ್ನು ಆಕೆಯ ಪುತ್ರಿಯ ಮುಂದೆಯೇ ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ತಮಿಳುನಾಡಿನ ಚೆಂಗಲ್ಪಟ್ಟು ಜಿಲ್ಲೆಯ ಮರಿಮಲೈ ನಗರದಲ್ಲಿ ಮಂಗಳವಾರ ನಡೆದಿದೆ. ಕೃತ್ಯ ಎಸಗಿದ ಬಳಿಕ ಆರೋಪಿ ಪೊಲೀಸ್ ಠಾಣೆಗೆ ತೆರಳಿ ಶರಣಾಗಿದ್ದಾನೆ.
ಮರಿಮಲೈ ನಗರದ ರಾಜೀವ್ಗಾಂಧಿ ನಗರದ ನಿವಾಸಿ ಧರಣಿ (21) ಮೃತಪಟ್ಟ ದುರ್ದೈವಿ. ಈಕೆ ಪತಿ ಇಲೆಕ್ಟ್ರಿಷಿಯನ್ ಆಗಿರುವ ಸುಂದರ್. ದಂಪತಿಗೆ ಇಬ್ಬರು ಮಕ್ಕಳಿದ್ದರು.
ಸುಂದರನ ಸ್ನೇಹಿತ ಸುಡಾನ್ (30) ಆಗಾಗ ಇವರ ಮನೆಗೆ ಬರುತ್ತಿದ್ದ. ಇಬ್ಬರು ಸೇರಿ ಎಣ್ಣೆ ಪಾರ್ಟಿ ಮಾಡುತ್ತಿದ್ದರು. ಹೀಗೆ ಬರುತ್ತಿದ್ದ ಸುಡಾನ್ ಗೆ ಸ್ನೇಹಿತ ಸುಂದರನ ಪತ್ನಿ ಸ್ನೇಹವಾಗಿದೆ. ಧರಣಿಗೂ ಈತ ಮೇಲೆ ಸ್ನೇಹವಾಗಿದೆ. ಇಬ್ಬರ ನಡುವಿನ ಈ ಸ್ನೇಹ ಅಕ್ರಮ ಸಂಬಂಧಕ್ಕೆ ತಿರುಗಿದೆ. ಇಬ್ಬರು ಸುಂದರ್ಗೆ ತಿಳಿಯದಂತೆ ರಹಸ್ಯ ಸಂಬಂಧವನ್ನು ಇಟ್ಟುಕೊಂಡಿದ್ದರು.
ಕೆಲವು ತಿಂಗಳುಗಳ ಹಿಂದೆ ಸುಂದರ್ಗೆ ಈ ವಿಚಾರ ತಿಳಿದು ಇಬ್ಬರಿಗೂ ಎಚ್ಚರಿಕೆ ನೀಡಿದ್ದಾನೆ. ಇದಾದ ಬಳಿಕ ಧರಣಿ ಸುಡಾನ್ ನೊಂದಿಗೆ ಮಾತನಾಡುವುದನ್ನು ನಿಲ್ಲಿಸಿದ್ದಾಳೆ. ಆದರೆ ಈ ನಡುವೆ ಧರಣಿಗೆ ಬೇರೊಬ್ಬನೊಂದಿಗೆ ಸಂಬಂಧ ಇರುವುದು ಸುಡಾನ್ಗೆ ತಿಳಿದಿದೆ. ಸುಡಾನ್ ಈ ಬಗ್ಗೆ ಧರಣಿಯನ್ನು ಪ್ರಶ್ನಿಸಿದ್ದಾನೆ. ಈ ವೇಳೆ ಇಬ್ಬರ ನಡುವೆ ಮಾತಿನ ಚಕಮಕಿ ನಡೆದಿದೆ
ಆದರೆ, ಮರುದಿನ ಬೆಳಗ್ಗೆ ಅಂದರೆ ಮಂಗಳವಾರ ಸುಂದರ್, ಕೆಲಸಕ್ಕೆ ತೆರಳಿದ್ದಾನೆ. ಈ ವೇಳೆ ಆತನ ಮನೆಗೆ ತೆರಳಿದ ಸುಡಾನ್, ಎರಡು ವರ್ಷದ ಪುತ್ರಿಯ ಎದುರಲ್ಲೇ ಚಾಕುವಿನಿಂದ ಧರಣಿಯ ಮೇಲೆ ದಾಳಿ ಮಾಡಿದ್ದಾನೆ. ಆಕೆ ಮೃತಪಟ್ಟಿರುವುದು ಖಚಿತವಾದ ಬಳಿಕ ಚಾಕು ಸಮೇತ ಮರಿಮಲೈ ನಗರ ಪೊಲೀಸ್ ಠಾಣೆಗೆ ತೆರಳಿ ಪೊಲೀಸರ ಮುಂದೆ ಸುಡಾನ್ ಶರಣಾಗಿದ್ದಾನೆ.
ಇದಾದ ಬಳಿಕ ಪೊಲೀಸರು ಘಟನಾ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿ, ಧರಣಿಯ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಚೆಂಗಲ್ಪಟು ಜನರಲ್ ಆಸ್ಪತ್ರೆಗೆ ರವಾನಿಸಿದ್ದಾರೆ. ಪ್ರಕರಣವನ್ನು ದಾಖಲಿಸಿದ್ದು, ತನಿಖೆ ನಡೆಯುತ್ತಿದೆ.