ಕೊಲ್ಕತ್ತಾ: ಪಾಕ್ ಗೂಢಾಚಾರಿ ಅರೆಸ್ಟ್
Sunday, August 27, 2023
ಕೋಲ್ಕತಾ: ಪಾಕಿಸ್ತಾನದ ಗೂಢಚಾರಿ ಎಂದು ಹೇಳಲಾಗುತ್ತಿರುವ ಶಂಕಿತ ವ್ಯಕ್ತಿಯನ್ನು ಕೋಲ್ಕತಾದಲ್ಲಿ ಬಂಧಿಸಲಾಗಿದೆ. ಆತನ ಬಳಿಯಿಂದ ಸೂಕ್ಷ್ಮದಾಖಲೆಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಆರೋಪಿ ಶಂಕಿತ ಪಾಕ್ ಗೂಢಚಾರಿ ಬಿಹಾರ ನಿವಾಸಿಯಾಗಿದ್ದಾನೆ ಎಂದು ತಿಳಿದು ಬಂದಿದೆ. ಸುಳಿವಿನ ಮೇರೆಗೆ ಶುಕ್ರವಾರ ಆರೋಪಿಯನ್ನು ಆತನ ಹೌರಾ ನಿವಾಸದಿಂದ ಬಂಧಿಸಲಾಗಿದೆ.
ಆರೋಪಿತ ದೇಶದ ಸುರಕ್ಷತೆಗೆ ಹಾನಿಯನ್ನುಂಟು ಮಾಡುವ ಚಟುವಟಿಕೆಗಳಲ್ಲಿ ನೇರವಾಗಿ ತೊಡಗಿಕೊಂಡಿದ್ದ ಎನ್ನುವುದು ಬೆಳಕಿಗೆ ಬಂದಿದೆ. ಕೆಲವು ಗಂಟೆಗಳ ಕಾಲ ಆತನನ್ನು ವಿಚಾರಣೆಯ ಬಳಿಕ ಶುಕ್ರವಾರ ತಡರಾತ್ರಿ ಆತನನ್ನು ಬಂಧಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಯೋರ್ವರನ್ನು ಉಲ್ಲೇಖಿಸಿ ವರದಿಯು ತಿಳಿಸಿದೆ. ಆರೋಪಿಯ ಮೊಬೈಲ್ ಫೋನ್ ನಲ್ಲಿ ಛಾಯಾಚಿತ್ರಗಳು, ವೀಡಿಯೊಗಳು ಮತ್ತು ಆನೈನ್ ಚಾಟ್ ಗಳ ರೂಪದಲ್ಲಿ ರಹಸ್ಯ ಮಾಹಿತಿಗಳು ಪತ್ತೆಯಾಗಿವೆ. ಆತ ಇವುಗಳನ್ನು ಶಂಕಿತ ಪಾಕ್ ಗುಪ್ತಚರ ಏಜೆಂಟ್ ಕಳುಹಿಸಿದ್ದ ಎಂದು ವರದಿಯು ಹೇಳಿದೆ.
ಕೋಲ್ಕತಾದಲ್ಲಿ ಕೊರಿಯರ್ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ಆರೋಪಿಯು ಮೊದಲು ದಿಲ್ಲಿಯಲ್ಲಿ ವಾಸವಾಗಿದ್ದ ಎಂದೂ ವರದಿಯು ತಿಳಿಸಿದೆ.