-->
ಪಾಠ ಮಾಡುತ್ತಿದ್ದಾಗ ಹಿಂದೂ ದೇವತೆಗಳ ಅವಹೇಳನ : ಪ್ರೊಫೆಸರ್ ಅರೆಸ್ಟ್

ಪಾಠ ಮಾಡುತ್ತಿದ್ದಾಗ ಹಿಂದೂ ದೇವತೆಗಳ ಅವಹೇಳನ : ಪ್ರೊಫೆಸರ್ ಅರೆಸ್ಟ್


ಪುಣೆ: ಪಾಠ ಮಾಡುತ್ತಿರುವ ವೇಳೆ ಹಿಂದೂ ದೇವತೆಗಳ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿರುವ ಆರೋಪದ ಮೇಲೆ ಕಾಲೇಜು ಪ್ರೊಫೆಸರ್ ಒಬ್ಬನನ್ನು ಪೊಲೀಸರು ವಶಕ್ಕೆ ಪಡೆದಿರುವ ಘಟನೆ ಮಹಾರಾಷ್ಟ್ರದ ಪುಣೆಯಲ್ಲಿ ನಡೆದಿದೆ.

ಸಿಮ್​ಬೈಯೋಸಿಸ್​ ಕಾಲೇಜಿನಲ್ಲಿ ಹಿಂದಿ ಪ್ರೊಫೆಸರ್​ ಆಗಿ ಕಾರ್ಯನಿರ್ವಹಿಸುತ್ತಿರುವ ಅಶೋಕ್​ ಧೋಲೆ(43) ಬಂಧಿತ ಆರೋಪಿ.

ಎಬಿವಿಪಿ ಹಾಗೂ ಆರ್​ಎಸ್​ಎಸ್​ ಕಾರ್ಯಕರ್ತರು ಈ ಬಗ್ಗೆ ದೂರು ನೀಡಿದ್ದರು. ಇದರನ್ವಯ ಆರೋಪಿ ಪ್ರೊಫೆಸರ್ ನನ್ನು ವಶಕ್ಕೆ ಪಡೆದಿದ್ದಾರೆ. ಈತ ತರಗತಿಯಲ್ಲಿ ಪಾಠ ಮಾಡುವ ವೇಳೆ ಹಿಂದೂ ದೇವತೆಗಳ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ್ದಾನೆ. ಈ ವಿಡಿಯೋವನ್ನು ವಿದ್ಯಾರ್ಥಿಯೊಬ್ಬ ಸೆರೆ ಹಿಡಿದು ಸಾಮಾಜಿಕ ಜಾಲತಾಣಗಳಲ್ಲಿ ಅಪ್ಲೋಡ್​ ಮಾಡಿದ್ದಾನೆ.

ಈ ಸಂಬಂಧ ಬುಧವಾರ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್​(ABVP), ರಾಷ್ಟ್ರೀಯ ಸ್ವಯಂ ಸೇವಕ ಸಂಘ(RSS) ಸದಸ್ಯರು ಪ್ರತಿಭಟನೆ ನಡೆಸಿ ಡೆಕ್ಕನ್​ ಜಿಮ್ಖಾನಾ ಪೊಲೀಸ್​ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಪ್ರೊಫೆಸರ್ ವಿರುದ್ಧ ಭಾರತ ದಂಡ ಸಂಹಿತೆ(IPC Section) 295ರ ಅಡಿಯಲ್ಲಿ ಬಂಧಿಸಿದ್ದಾರೆ.

Ads on article

Advertise in articles 1

advertising articles 2

Advertise under the article