ಬೆಳ್ಳಂಬೆಳಗ್ಗೆ ದಿಲ್ಲಿ ತರಕಾರಿ ಮಾರುಕಟ್ಟೆಗೆ ರಾಹುಲ್ ಗಾಂಧಿ ಭೇಟಿ
Wednesday, August 2, 2023
ಹೊಸದಿಲ್ಲಿ: ಹರಿಯಾಣದಲ್ಲಿ ಕೃಷಿಕರೊಂದಿಗೆ ನಾಟಿ ಮಾಡಿ, ಚಂಡೀಗಢವರೆಗೆ ಟ್ರಕ್ ಏರಿ ಸವಾರಿ ಮಾಡುತ್ತಾ ಸಾರ್ವಜನಿಕರ ಬದುಕು-ಬವಣೆಗಳ ಬಗ್ಗೆ ಮಾಹಿತಿ ಕಲೆಹಾಕಿ ಗಮನಸೆಳೆದಿದ್ದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮಂಗಳವಾರ ತರಕಾರಿ ಮಾರು ಕಟ್ಟೆಗೆ ಅಚ್ಚರಿಯ ಭೇಟಿ ನೀಡಿದರು.
ಏಷ್ಯಾದ ಅತಿದೊಡ್ಡ ತರಕಾರಿ ಮಾರುಕಟ್ಟೆ ಎಂಬ ಖ್ಯಾತಿಯ 'ಆಜಾದ್ ಪುರ್ ಮಂಡಿ'ಗೆ ಮಂಗಳವಾರ ನಸುಕಿನಲ್ಲಿ
ರಾಹುಲ್ ಭೇಟಿ ನೀಡಿ, ವ್ಯಾಪಾರಿಗಳೊಂದಿಗೆ ಸುದೀರ್ಘ ಸಮಯ ಸಮಾಲೋಚನೆ ನಡೆಸಿದ್ದಾರೆ.
ತರಕಾರಿಗಳ ಸದ್ಯದ ಮಾರುಕಟ್ಟೆ ಬೆಲೆ, ಹಣ್ಣುಗಳ ಬೆಲೆಯಲ್ಲಿ ಹೆಚ್ಚಳ, ಮುಂದಿನ ದಿನಗಳಲ್ಲಿ ತರಕಾರಿ ದರಗಳ ಏರಿಕೆ-ಇಳಿಕೆ ಬಗ್ಗೆ ವ್ಯಾಪಾರಿಗಳಿಂದ ರಾಹುಲ್ ಮಾಹಿತಿಯನ್ನು ಕಲೆಹಾಕಿದ್ದಾರೆ. ಕಾಂಗ್ರೆಸ್ ಈ ಬಗ್ಗೆ ವಿಡಿಯೊ ಪಕ್ಷದ ಅಧಿಕೃತ ಟ್ವಿಟರ್ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ.