ರಾತ್ರಿ ವೇಳೆ ಮನೆಗೆ ನುಗ್ಗಿ ಪತಿಯ ಕೊಲೆ, ಶವದ ಮುಂದೆಯೇ ಪತ್ನಿಯ ಅತ್ಯಾಚಾರ!
Saturday, August 5, 2023
ನವದೆಹಲಿ: ಪತಿಯನ್ನು ಕೊಲೆಗೈದಿದ್ದು ಮಾತ್ರವಲ್ಲದೇ ಆತನ ಶವದ ಮುಂದೆಯೇ ಆತನ ಪತ್ನಿಯ ಅತ್ಯಾಚಾರ ಎಸಗಿದ ಅಮಾನವೀಯ ಘಟನೆ ಛತ್ತೀಸ್‌ಗಡದಲ್ಲಿ ನಡೆದಿದೆ.
ಛತ್ತೀಸ್‌ಗಡದ ಅಂಬಿಕಾಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಕೊಲೆ ಮಾಡಿದ ಕಿರಾತಕನನ್ನು ಪೊಲೀಸರು ಬಂಧನ ಮಾಡಿದ್ದಾರೆ.
ಕಾರ್ತಿಕ್ (21) ಎಂಬಾತ ಈ ಕುಕೃತ್ಯ ಎಸಗಿದ್ದು, ಕೊಲೆಯಾದ ವ್ಯಕ್ತಿಯನ್ನು ಸುಖ್‌ಪಾಲ್ (42) ಎಂದು ಗುರುತಿಸಲಾಗಿದೆ. ರಾತ್ರಿ ವೇಳೆ ಮನೆಗೆ ನುಗ್ಗಿ ಕೊಲೆ ಮಾಡಲಾಗಿದೆ.
ಕೊಲೆಯಾದ ವ್ಯಕ್ತಿ ಸುಖ್‌ಪಾಲ್ ಎಂಬಾತನ ತಲೆಗೆ ದೊಣ್ಣೆಯಿಂದ ಹೊಡೆದ ಆರೋಪಿಯು ಆತನನ್ನು ಕೊಲೆ ಮಾಡಿದ ಬಳಿಕ ಆತನ ಪತ್ನಿಯ ಮೇಲೆ ಬಲವಂತವಾಗಿ ರೇಪ್ ಮಾಡಿದ್ದಾನೆ ಎಂದು ತಿಳಿದು ಬಂದಿದೆ.
ಮೂಲಗಳ ಪ್ರಕಾರ ಆರೋಪಿ ಕಾರ್ತಿಕ್ ಜೊತೆ ತನ್ನ ಪತ್ನಿ ಅಕ್ರಮ ಸಂಬಂಧ ಹೊಂದಿದ್ದಾಳೆ ಎಂದು ಮೃತ ಸುಖ್‍ಲಾಲ್ ಆಗಾಗ ಗಲಾಟೆ ಮಾಡುತ್ತಿದ್ದ ಎಂದು ತನಿಖೆ ವೇಳೆ ತಿಳಿದು ಬಂದಿದೆ. ಇದರಿಂದ ಆರೋಪಿ ಬೇಸತ್ತು ಆತನನ್ನು ಕೊಲೆ ಮಾಡಿದ್ದಾನೆ.
ಸುಖ್‌ಪಾಲ್‌ನನ್ನು ಕೊಲೆ ಮಾಡಿದ ಬಳಿಕ ಮಹಿಳೆಯ ಮೇಲೆ ಅತ್ಯಾಚಾರ ಎಸಗಿದ ಬಳಿಕ ಅಲ್ಲಿಂದ ಪರಾರಿಯಾಗಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಕಾರ್ತಿಕ್ ಇತ್ತೀಚೆಗೆ ರಾತ್ರಿ ವೇಳೆ ದಂಪತಿಯ ಮನೆಗೆ ತೆರಳಿದ್ದ. ಈ ವೇಳೆ ಪತ್ನಿ ಕಾರ್ತಿಕ್ ಜೊತೆ ಸಂಬಂಧ ಹೊಂದಿದ್ದಾಳೆಂದು ಶಂಕಿಸಿ ಸುಖಲಾಲ್ ಗಲಾಟೆಯನ್ನು ಮಾಡಿದ್ದ. ಈ ವೇಳೆ ಇಬ್ಬರ ಜಗಳ ವಿಕೋಪಕ್ಕೆ ತಿರುಗಿ ಹತ್ಯೆಯಲ್ಲಿ ಅಂತ್ಯವಾಗಿದೆ.
ಇಷ್ಟಾದರೂ ಅಲ್ಲಿಂದ ತೆರಳದ ಆರೋಪಿ ಕೊಲೆಯಾದವನ ಪತ್ನಿಯನ್ನು ಬೆದರಿಸಿ ಅತ್ಯಾಚಾರ ಎಸಗಿದ್ದಾನೆ ಎಂದು ಮಹಿಳೆ ನೀಡಿರುವ ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಈ ಬಗ್ಗೆ ಮಹಿಳೆ ಅಂಬಿಕಾಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಳು. ದೂರಿನ ಆಧಾರದ ಮೇಲೆ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಆತನ ವಿರುದ್ಧ ಐಪಿಸಿ ಸೆಕ್ಷನ್ ಅಡಿಯಲ್ಲಿ ಕೊಲೆ ಪ್ರಕರಣ ದಾಖಲಿಸಿದ್ದಾರೆ