-->
ರಶೀದಾ ಕೆದಿಲ ಅವರಿಗೆ ಡಾಕ್ಟರೇಟ್ ಪದವಿ

ರಶೀದಾ ಕೆದಿಲ ಅವರಿಗೆ ಡಾಕ್ಟರೇಟ್ ಪದವಿ


ರಶೀದಾ ಕೆದಿಲ ( RASHIDA KEDILA)ರವರಿಗೆ "ಡಿಸೈನ್ ಆಂಡ್ ಸಿಂತೆಸಿಸ್ ಆಫ್ ಸಮ್ ಹೆಟಿರೋಸೈಕ್ಲಿಕ್ ಕಂಪೌಂಡ್ಸ್ ಫಾರ್ ದಿ ಕೊರೋಸನ್ ಇನ್‌ಹಿಬಿಷನ್ ಆಫ್ ಮೈಲ್ಡ್ ಸ್ಟೀಲ್" ಎಂಬ ವಿಷಯದಲ್ಲಿ ಮಂಡಿಸಿರುವ ಸಂಶೋಧನಾ ಪ್ರಬಂಧಕ್ಕೆ ಬೆಳಗಾವಿಯ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾನಿಲಯದ 23ನೇ ಘಟಿಕೋತ್ಸವದಲ್ಲಿ ಡಾಕ್ಟರೇಟ್ ಪದವಿ ಪ್ರದಾನ ಮಾಡಲಾಯಿತು.


ಇವರು ಕೆಂಜಾರಿನ ಶ್ರೀ ದೇವಿ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ಪ್ರಾಧ್ಯಾಪಕಿ ಡಾ. ವಿಜಯ ಡಿ. ಪಿ. ಆಳ್ವ ಹಾಗೂ ಉಜಿರೆಯ ಎಸ್ ಡಿ ಎಂ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ಡಾ. ಕೃಷ್ಣಪ್ರಸಾದ್ ಅವರ ಮಾರ್ಗದರ್ಶನದಲ್ಲಿ ಪಿಹೆಚ್‌ಡಿ ಪ್ರಬಂಧ ಮಂಡಿಸಿದ್ದರು. 


ರಶೀದಾ ಕೆ ತಮ್ಮ ಪ್ರಾಥಮಿಕ ಶಿಕ್ಷಣವನ್ನು ಕೆದಿಲದ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ, ಪ್ರೌಢ ಶಿಕ್ಷಣವನ್ನು ನಾರ್ಶದ ಸರಕಾರಿ ಪ್ರೌಢಶಾಲೆಯಲ್ಲಿ, ಪಿಯುಸಿ ಮತ್ತು ಬಿಎಸ್ಸಿ ಪದವಿ ಶಿಕ್ಷಣವನ್ನು ಬಂಟ್ವಾಳದ ಎಸ್‌ವಿಎಸ್ ಕಾಲೇಜಿನಲ್ಲಿ ಹಾಗೂ ಎಂಎಸ್ಸಿ ಪದವಿಯನ್ನು ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ಪೂರೈಸಿದ್ದಾರೆ.
ಇವರು ಕೆದಿಲದ ಮರ್‌ಹೂಂ ಇಸ್ಮಾಯಿಲ್ ಹಾಜಿ ಮತ್ತು ಶ್ರೀಮತಿ ಮರಿಯಮ್ಮರವರ ಪುತ್ರಿ ಹಾಗೂ ವಿಟ್ಲದ ಡಾ. ಸಂಶುದ್ದೀನ್ ಸೆರಂತಿಮಠರವರ ಪತ್ನಿ.

Ads on article

Advertise in articles 1

advertising articles 2

Advertise under the article