-->
Reynolds 045 ಬಾಲ್ ಪೆನ್ ಯುಗಾಂತ್ಯವಾಯಿತೆ? ಸತ್ಯಾಂಶ ಇಲ್ಲಿದೆ

Reynolds 045 ಬಾಲ್ ಪೆನ್ ಯುಗಾಂತ್ಯವಾಯಿತೆ? ಸತ್ಯಾಂಶ ಇಲ್ಲಿದೆ


 ಹೊಸದಿಲ್ಲಿ:  Reynolds ಕಂಪನಿಯು ತನ್ನ ಜನಪ್ರಿಯ ಬಾಲ್ ಪೆನ್ 'Reynolds 045' ಉತ್ಪಾದನೆಯನ್ನು ನಿಲ್ಲಿಸಲಿ ದೆಯೇ? ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿನ (ಟ್ವಿಟರ್ ) ಸಂದೇಶವೊಂದರಲ್ಲಿರೆನಾಲ್ಡ್‌ಪೆನ್‌ ಇತಿಹಾಸದ ಪುಟ ಸೇರುತ್ತಿದೆ ಎಂದು ಹೇಳಲಾಗಿದ್ದು, ಈ ಪೋಸ್ಟ್ ವೈರಲ್ ಆಗಿದೆ. ಅನೇಕರು ತೀವ್ರ ನಿರಾಶೆ ವ್ಯಕ್ತಪಡಿಸುತ್ತಲೇ ಆ ಪೆನ್‌ನೊಂದಿಗಿನ ತಮ್ಮ ನೆನಪುಗಳನ್ನು ಹಂಚಿಕೊಂಡಿದ್ದಾರೆ.

'Reynolds 045' ಪೆನ್ ಕೈಗೆಟುಕುವ ದರ ಮತ್ತು ದೀರ್ಘಾಯುಷ್ಯಕ್ಕಾಗಿ ಭಾರತದಲ್ಲಿ ಮನೆಮಾತಾಗಿದೆ. 90ರ ದಶಕದಲ್ಲಿ ಸಾಟಿಯಿಲ್ಲದ ಜನಪ್ರಿಯತೆಯನ್ನು ಗಳಿಸಿ, ಮಾರುಕಟ್ಟೆಯಲ್ಲಿ ಪ್ರಾಬಲ್ಯ ಸಾಧಿಸಿತ್ತು. ಈಗಲೂ ಪೆನ್ ಲಭ್ಯವಿದ್ದು, ಅದನ್ನು ಅನೇಕರು ಹೆಮ್ಮೆಯಿಂದಲೇ ಬಳಸುತ್ತಿದ್ದಾರೆ.

ಇಂದಿಗೂ, Reynolds  ವೆಬ್‌ಸೈಟ್‌ನಲ್ಲಿ ಪೆನ್ 7 ರೂ.ಗೆ ಲಭ್ಯವಿದೆ. ದರವು ಇಷ್ಟು ವರ್ಷಗಳಲ್ಲಿ ಅದರ ಮೂಲ ಬೆಲೆ 6 ರೂ.ಗಿಂತಲೂ ಸ್ವಲ್ಪವಷ್ಟೇ ಹೆಚ್ಚಳವಾಗಿದೆ.


ಸುದ್ದಿ ತಳ್ಳಿಹಾಕಿದ ಕಂಪನಿ

ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ಸುದ್ದಿಗೆ ಸ್ಪಷ್ಟಿಕರಣ ನೀಡಿರುವ ರೆನಾಲ್ಡ್ ಕಂಪನಿ, ''Reynolds
045 ಬಾಲ್ ಪೆನ್ ಅನ್ನು ನಿಲ್ಲಿಸುವ ಯಾವುದೇ ಯೋಜನೆಯನ್ನು ನಾವು ಹೊಂದಿಲ್ಲ. ಸಾಮಾಜಿಕ ಜಾಲತಾಣದಲ್ಲಿನ ಸುದ್ದಿಯು ಸಂಪೂರ್ಣವಾಗಿ ತಪ್ಪಾಗಿದೆ. ಜನರನ್ನು ದಾರಿ ತಪ್ಪಿಸುವ ಗುರಿಯನ್ನು ಹೊಂದಿದೆ. ಭಾರತೀಯ ಮಾರುಕಟ್ಟೆಯಲ್ಲಿ ಗಮನಾರ್ಹ ಅಸ್ತಿತ್ವವನ್ನು ಉಳಿಸಿಕೊಳ್ಳುವುದನ್ನು ಕಂಪನಿ ಮುಂದುವರಿಸಿದೆ,'' ಎಂದಿದೆ.

ಒಂದು ಯುಗದ ಅಂತ್ಯ!

ಜನಪ್ರಿಯ ಟ್ವಿಟರ್ ಖಾತೆ '90ಸ್ಕಿಡ್'ನಲ್ಲಿ ಪ್ರಕಟವಾದ ಒಂದು ಪೋಸ್ಟ್‌ನಲ್ಲಿ, ''Reynolds ಕಂಪನಿಯು ಐಕಾನಿಕ್ ಬಾಲ್ ಪಾಯಿಂಟ್ ಪೆನ್ ತಯಾರಿಕೆಯನ್ನು ನಿಲ್ಲಿಸುತ್ತಿದೆ. "Reynolds 045 Fine Carbure' ಇನ್ನು ಮುಂದೆ ಮಾರುಕಟ್ಟೆಯಲ್ಲಿ ಲಭ್ಯವಿರುವುದಿಲ್ಲ, ಒಂದು ಯುಗದ ಅಂತ್ಯ..” ಎಂದು ಹೇಳಲಾಗಿತ್ತು.

 ಈ ಪೋಸ್ಟ್ 18 ಲಕ್ಷ ವೀಕ್ಷಣೆಯನ್ನು ಗಳಿಸಿದೆ. ರೆನಾಲ್ಡ್ 045 ಪೆನ್ ಕಣ್ಮರೆಯಾಗುವ ಮೊದಲು, ಅದನ್ನು ಖರೀದಿಸುವುದಾಗಿ ಅನೇಕ ಟ್ವಿಟರ್ ಬಳಕೆದಾರರು ಹೇಳಿದ್ದಾರೆ. ವೈರಲ್ ಪೋಸ್ಟ್ ಓದಿದ ನಂತರ ಕೆಲವರು ತಾವು ಖರೀದಿಸಿದ ಪೆನ್ನುಗಳ ಚಿತ್ರಗಳನ್ನು ಹಂಚಿಕೊಂಡಿದ್ದಾರೆ. ''ನಾನು ಈಗಲೂ Reynolds ಪೆನ್ ಅನ್ನೇ ಬಳಸುತ್ತಿದ್ದೇನೆ. ಈಗ 15 ಪೆನ್‌ಗಳನ್ನು ನನ್ನ ಕಚೇರಿಗಾಗಿ ಆರ್ಡರ್ ಮಾಡಿದೆ,'' ಎಂದು ಟ್ವಿಟರ್ ಬಳಕೆದಾರರೊಬ್ಬರು ಬರೆದಿದ್ದಾರೆ. ಇದು ಭಾರತದ ರಾಷ್ಟ್ರೀಯ ಲೇಖನಿಯಾಗಬೇಕು,'' ಎಂದು ಮತ್ತೊಬ್ಬರು ಹೇಳಿದ್ದಾರೆ.

Ads on article

Advertise in articles 1

advertising articles 2

Advertise under the article