-->
ಉಡುಪಿಯ ಬಳಿಕ ಹುಬ್ಬಳ್ಳಿಯಲ್ಲಿ ವಿದ್ಯಾರ್ಥಿನಿಯರೆ TARGET-  INSTAGRAM ನಲ್ಲಿ ಪೊಟೋ ಹ್ಯಾಕ್ ಮಾಡಿ ಅಸಹ್ಯಕರ ಎಡಿಟ್

ಉಡುಪಿಯ ಬಳಿಕ ಹುಬ್ಬಳ್ಳಿಯಲ್ಲಿ ವಿದ್ಯಾರ್ಥಿನಿಯರೆ TARGET- INSTAGRAM ನಲ್ಲಿ ಪೊಟೋ ಹ್ಯಾಕ್ ಮಾಡಿ ಅಸಹ್ಯಕರ ಎಡಿಟ್

ಹುಬ್ಬಳ್ಳಿ: ಉಡುಪಿಯ ಖಾಸಗಿ ಕಾಲೇಜಿನಲ್ಲಿ ವಿಡಿಯೊ ಪ್ರಕರಣ ಸದ್ದು ಮಾಡುತ್ತಿರುವಾಗಲೇ ಹುಬ್ಬಳ್ಳಿಯಲ್ಲಿ ಅಂತಹುದೇ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ. ಈ ಘಟನೆ ನಗರದ ಕಾಲೇಜಿನ ವಿದ್ಯಾ ರ್ಥಿನಿಯರು ಹಾಗೂ ಪಾಲಕರಲ್ಲಿ ಆತಂಕ ಹುಟ್ಟಿಸಿದೆ.

ಸೈಬರ್ ವಂಚಕರು ನಗರದ ಕೆಲ ಕಾಲೇಜುಗಳ ವಿದ್ಯಾರ್ಥಿನಿಯರನ್ನೇ ಟಾರ್ಗೆಟ್ ಮಾಡುತ್ತಿದ್ದಾರೆ. INSTAGRAM ನಲ್ಲಿ ಅವರ ಫೋಟೊಗಳನ್ನು ಹ್ಯಾಕ್ ಮಾಡಿ ಅಸಹ್ಯಕರವಾಗಿ ಎಡಿಟ್ ಮಾಡಿ ಅವರದೇ ಕಾಲೇಜಿನ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಹಾಕುವ ಜತೆಗೆ ಬೆದರಿಕೆ ಪೋಸ್ಟ್ ಕಳಿಸುತ್ತಿರುವುದು  ಆತಂಕ ಸೃಷ್ಟಿ  ಮಾಡಿದೆ.

ವಿಷಯ ಬೆಳಕಿಗೆ ಬರುತ್ತಿದ್ದಂತೆ ಹುಬ್ಬಳ್ಳಿ- ಧಾರವಾಡ ಪೊಲೀಸ್ ಕಮೀಷನರ್ ಕಾಲೇಜಿಗೆ ಭೇಟಿ ನೀಡಿ ವಿಚಾರಣೆ ನಡೆಸಿದ್ದಾರಲ್ಲದೇ, ಸೈಬರ್ (ಸೆನ್) ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಪರಿಶೀಲನೆ ನಡೆಸಲಾಗಿದೆ.

ಕಳೆದ 3 ತಿಂಗಳಿಂದ ಅವಳಿ ನಗರದ ಕೆಲ ಕಾಲೇಜಿನ ವಿದ್ಯಾರ್ಥಿಗಳ Instagram ಖಾತೆ ಹ್ಯಾಕ್ ಮಾಡಲಾ ಗಿದೆ. ಇನ್‌ಸ್ಟಾಗ್ರಾಮ್‌ನಲ್ಲಿರುವ photoಗಳನ್ನು ಅಸಹ್ಯಕರವಾಗಿ ಎಡಿಟ್ ಮಾಡಲಾಗುತ್ತಿದೆ. ನಂತರ ಫೋಟೊಗಳನ್ನು
ಜಾಲತಾಣಗಳಲ್ಲಿ ಹರಿಬಿಡುತ್ತಿರುವುದಲ್ಲದೇ ಮುಂದಿನ ಟಾರ್ಗೆಟ್ ಯಾರು ಎಂಬುದನ್ನೂ ಸಹ ಹಾಕಲಾಗುತ್ತದೆ. ಹೀಗಾಗಿ ಕೆಲ ವಿದ್ಯಾರ್ಥಿಗಳು ಹೆದರಿ ಮನೆಯಲ್ಲಿ ಈ ವಿಷಯ ತಿಳಿಸದೇ ಸುಮ್ಮನಿದ್ದರೆ, ಇನ್ನು ಕೆಲವರು ಕಾಲೇಜಿನ ಆಡಳಿತ ಮಂಡಳಿ ಹಾಗೂ ಸೈಬರ್ ಪೊಲೀಸರಿಗೆ ದೂರು ಸಲ್ಲಿಸಿ ದ್ದಾರೆ. 


ಪಾಲಕರು ಈ ವಿಷಯ ಕುರಿತು ಆಡಳಿತ ಮಂಡಳಿ ಜತೆ ಚರ್ಚೆ ಮಾಡಿದ ಮರುಕ್ಷಣವೇ ಸೈಬರ್ ವಂಚಕರಿಗೆ ಗೊತ್ತಾಗುತ್ತದೆ. ಇದಕ್ಕೆ ಪ್ರತಿಯಾಗಿ ಸೈಬರ್ ವಂಚಕರು, “ನೀವು ಯಾರಿಗೆ ಹೇಳಿದರೂ ನಮ್ಮನ್ನು ಹಿಡಿಯಲು ಸಾಧ್ಯವಿಲ್ಲ. ಇನ್ನಷ್ಟು ಚಿತ್ರಗಳು ಬರಲಿವೆ ಎಂಬ ಬೆದರಿಕೆ post ಹಾಕುತ್ತಿದ್ದಾರೆ,'' ಎಂದು ವಿದ್ಯಾರ್ಥಿನಿಯರು ಹಾಗೂ ಪೋಷಕರು ಕಳವಳ ವ್ಯಕ್ತಪಡಿಸಿದ್ದಾರೆ.

Ads on article

Advertise in articles 1

advertising articles 2

Advertise under the article