ರೈಲಿನಲ್ಲೇ ವಾಸ್ತವ್ಯವಿದ್ದಾಳಂತೆ ಈ ಯುವತಿ: ಅಲ್ಲೇ ಆಕೆಯ ಸ್ನಾನ, ಓದು, ನಿದ್ದೆ
Thursday, August 31, 2023
ಇತ್ತೀಚಿನ ದಿನಗಳಲ್ಲಿ ಬಾಡಿಗೆ ಮನೆಗಳಲ್ಲಿ ಬದುಕೋದು ಕಷ್ಟ ಎಂಬಂತಾಗಿದೆ. ಯಾಕೆಂದರೆ ಬರುವ ಅಲ್ಪಸ್ವಲ್ಪ ಸಂಬಳವು ಮನೆ ಬಾಡಿಗೆಗೇ ಖರ್ಚಾಗುತ್ತದೆ. ಆದ್ದರಿಂದ ಬಾಡಿಗೆ ಮನೆಯ ಹೊರೆಯನ್ನು ಕಡಿಮೆ ಮಾಡಲು ಇಲ್ಲೊಬ್ಬ ಯುವತಿ ವಿಶೇಷ ಪ್ಲ್ಯಾನ್ ಮಾಡಿದ್ದಾಳೆ.
ಅಪಾರ್ಟ್ಮೆಂಟ್ನಲ್ಲಿ ವಾಸಿಸುತ್ತಿದ್ದ ಜರ್ಮನಿಯ ಯುವತಿ ಬಾಡಿಗೆ ಮನೆಯಿಂದ ಬೇಸತ್ತು ರೈಲಿನಲ್ಲಿ ಜೀವನ ಸಾಗಿಸುತ್ತಿದ್ದಾಳೆ. ಆಕೆಗೆ ಇಡೀ ದಿನ ರೈಲಿನಲ್ಲಿ ಇರಲು ಆಕೆ ಬೇಸರವಾಗುವುದಿಲ್ಲವಂತೆ. ಆಕೆ ಅದನ್ನು ರಜೆ ಎಂದುಕೊಳ್ಳುತ್ತಾಳಂತೆ. ಮನೆಗಿಂತ ಅಗ್ಗವೂ ಕೂಡ ಎನ್ನುತ್ತಾಳೆ ಈಕೆ.
ಈ ಯುವತಿಯ ಹೆಸರು ಲಿಯೋನಿ. ಈ ಹಿಂದೆ ಎಲ್ಲರಂತೆ ಅಪಾರ್ಟ್ಮೆಂಟ್ನಲ್ಲಿ ವಾಸಿಸುತ್ತಿದ್ದ ಈಕೆಗೆ ಒಂದು ದಿನ ಬಾಡಿಗೆ ಮನೆಯ ಮಾಲಕರೊಂದಿಗೆ ಜಗಳವಾಯಿತು. ಅದಾದ ಬಳಿಕ ವಿಶಿಷ್ಟ ಜೀವನಶೈಲಿಯನ್ನು ಆಯ್ಕೆ ಮಾಡಿಕೊಂಡಿದ್ದಾಳಂತೆ. ಆದ್ದರಿಂದ ಮನೆಯಲ್ಲಿ ವಾಸಿಸುವ ಮೊದಲು ರೈಲಿನಲ್ಲಿ ಉಳಿದುಕೊಳ್ಳಲು ನಿರ್ಧರಿಸಿದ್ದಾಳೆ.
ತನ್ನ ಅಗತ್ಯ ಬಟ್ಟೆಗಳು, ಟ್ಯಾಬ್ಲೆಟ್ ಕಂಪ್ಯೂಟರ್ ಮತ್ತು ಸ್ಯಾನಿಟರಿ ಬ್ಯಾಗ್‌ನೊಂದಿಗೆ ಮಾತ್ರ ರೈಲಿನಲ್ಲಿ ವಾಸಿಸುತ್ತಿದ್ದಾಳಂತೆ. ಆಕೆಯ ಎಲ್ಲಾ ಸ್ನೇಹಿತರು ಈ ರೀತಿಯ ಅಲೆಮಾರಿತನವನ್ನು ಇಷ್ಟಪಡುವುದಿಲ್ಲ ಎಂದು ಲಿಯೋನಿ ಹೇಳಿದ್ದಾಳೆ.