ಕಿರುಕುಳ ನೀಡಿದಾತನಿಗೆ ಚಪ್ಪಲಿಯಲ್ಲಿ ಹಿಡೆದ ಯುವತಿ: ಪಂಚಾಯತ್ ಸೂಚನೆ
Saturday, August 19, 2023
ಉತ್ತರಪ್ರದೇಶ: ತನ್ನದೇ ಗ್ರಾಮದ ವ್ಯಕ್ತಿಯೊಬ್ಬ ತನಗೆ ಕಿರುಕುಳ ನೀಡಿದ್ದಾ ಬಗ್ಗೆ ಹಾಪುರ್ ಜಿಲ್ಲೆಯ ಪಂಚಾಯತ್ ಗೆ ದೂರು ನೀಡಿದ್ದಾಳೆ. ಈ ಸಮಸ್ಯೆಗೆ ವಿಭಿನ್ನ ರೀತಿಯಲ್ಲಿ ತೀರ್ಪು ನೀಡಿದ ಪಂಚಾಯತ್, ಯುವಕನಿಗೆ ಚಪ್ಪಲಿಯಲ್ಲಿ ಹೊಡೆಯುವಂತೆ ಸೂಚಿಸಿದೆ.
ಅದರಂತೆ ಯುವತಿ ತನಗೆ ಕಿರುಕುಳ ನೀಡಿರುವ ಯುವಕನಿಗೆ ನಡುರಸ್ತೆಯಲ್ಲಿಯೇ ಚಪ್ಪಲಿಯಲ್ಲಿ ಬಾರಿಸಿದ್ದಾಳೆ. ಈ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿದೆ. ಆಕೆ ಸಾರ್ವಜನಿಕರ ಮುಂದೆಯೇ ಕಿರುಕುಳ ನೀಡುತ್ತಿದ್ದಾತನಿಗೆ ಹೊಡೆದಿದ್ದಾಳೆ. ಯುವತಿ ಕಾಲಿನಿಂದ ತನ್ನ ಚಪ್ಪಲಿಯನ್ನು ತೆಗೆದು, ರಪ್ಪರಪ್ಪನೇ ವ್ಯಕ್ತಿಯ ಕಪಾಳಕ್ಕೆ ಬಾರಿಸಿದ್ದಾಳೆ. ಈ ಶಿಕ್ಷೆಯನ್ನು ಸಾರ್ವಜನಿಕರ ಮುಂದೆ ಮತ್ತು ಪಂಚಾಯತ್ ಸದಸ್ಯರ ಸಮ್ಮುಖದಲ್ಲಿ ನೀಡಲಾಗಿದೆ.
ಘಟನೆಯ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹರಿದಾಡುತ್ತಿದ್ದಂತೆ, ಈ ಬಗ್ಗೆ ಸ್ಥಳೀಯ ಅಧಿಕಾರಿಗಳು ಮಾಹಿತಿ ಪಡೆದಿದ್ದಾರೆ. ಪ್ರಸ್ತುತ ಈ ಪ್ರಕರಣದ ತನಿಖೆ ನಡೆಯುತ್ತಿದೆ ಎಂದು ಬಹದ್ದೂರ್‌ಗಢ ಪೊಲೀಸ್ ಠಾಣೆಯ ಉಸ್ತುವಾರಿ ಸುಮಿತ್ ತೋಮರ್ ಹೇಳಿದ್ದಾರೆ.