ವಿಟ್ಲ ಅತ್ಯಾಚಾರ ಪ್ರಕರಣ-'ಆರೋಪಿಗಳು ಬಜರಂಗದಳ ಕಾರ್ಯಕರ್ತರಲ್ಲ': VHP
Saturday, August 5, 2023
ವಿಟ್ಲ: ಪರಿಶಿಷ್ಟ ಪಂಗಡದ ಬಾಲಕಿ ಮೇಲೆ ನಡೆದ ಅತ್ಯಾಚಾರ ಖಂಡನೀಯವಾಗಿದ್ದು, ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಹೆಣ್ಣು ಮಕ್ಕಳಿಗೆ ಅನ್ಯಾಯವಾದಾಗ ವಿಹಿಂಪ, ಬಜರಂಗದಳ ಖಂಡಿಸುತ್ತದೆ. ಈ ಪ್ರಕರಣದಲ್ಲಿ ಸಂತ್ರಸ್ತರಿಗೆ ನ್ಯಾಯ ಸಿಗಬೇಕು ಎಂದು ವಿಶ್ವ ಹಿಂದೂ ಪರಿಷತ್‌ನ ಪುತ್ತೂರು ಘಟಕದ ಅಧ್ಯಕ್ಷ ಕೃಷ್ಣ ಪ್ರಸನ್ನ ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, 'ದೌರ್ಜನ್ಯ ಎಸಗಿದವರನ್ನು ನಮ್ಮ ಸಂಘಟನೆಯ ಜತೆಗೆ ತಳಕು ಹಾಕುವ ಕೆಲಸ ಕೆಲವರಿಂದ ನಡೆಯುತ್ತಿದೆ. ಸಾಮಾಜಿಕ ಮಾಧ್ಯಮಗಳಲ್ಲೂ ತಪ್ಪು ಮಾಹಿತಿ ರವಾನೆಯಾಗುತ್ತಿದೆ. ಆರೋಪಿಗಳು ನಮ್ಮ ಕಾರ್ಯಕರ್ತರಲ್ಲ. ಸಂಘಟನೆಯ ಜತೆಗೆ ಯಾವುದೇ ಸಂಬಂಧವಿಲ್ಲ. ಕೆಟ್ಟ ಕೆಲಸ ಮಾಡಿದವರು ಯಾವುದೇ ಧರ್ಮದವರಿದ್ದರೂ ಅದನ್ನು ಬಜರಂಗದಳ ಖಂಡಿಸುತ್ತದೆ. ಹಿಂದೂ ಹುಡುಗರೆಲ್ಲರೂ ಬಜರಂಗದಳದ ಕಾರ್ಯಕರ್ತರಲ್ಲ' ಎಂದು ಹೇಳಿದರು.
ಬಜರಂಗದಳದ ಪುತ್ತೂರು ಘಟಕದ ಸಂಯೋಜಕ ಭರತ್ ಕುಮೇಲ್, ವಿಶ್ವಹಿಂದೂ ಪರಿಷತ್ ಮುಖಂಡ ಪದ್ಮನಾಭ ಕಟ್ಟೆ ಇದ್ದರು.