-->
14 ತಿಂಗಳ ಮಗುವನ್ನು ಕೊಂದ ಕ್ರೂರಿ ತಂದೆ

14 ತಿಂಗಳ ಮಗುವನ್ನು ಕೊಂದ ಕ್ರೂರಿ ತಂದೆ


ರಾಯಚೂರು:ತನ್ನ 14 ತಿಂಗಳ ಮಗುವನ್ನು ತಂದೆ ಹತ್ಯೆ ಮಾಡಿರುವ ಘಟನೆ ಜಿಲ್ಲೆಯ ಲಿಂಗಸೂಗೂರು ತಾಲೂಕಿನ ಕನಸವಿಯ ಗ್ರಾಮದಲ್ಲಿ ನಡೆದಿದೆ.

ಲಿಂಗಸುಗೂರು ತಾಲೂಕಿನ ಕನಸಾವಿ ಗ್ರಾಮದ ನಿವಾಸಿ ಮಹಾಂತೇಶ್ (32) ಆರೋಪಿ.   ಅಭಿನವ (14 ತಿಂಗಳು) ಸಾವನ್ನಪ್ಪಿದ ಮಗು.

ಪತಿ-ಪತ್ನಿ ಜಗಳದ ಹಿನ್ನಲೆಯಲ್ಲಿ ಆರೋಪಿ ಮಗುವನ್ನು ಕೊಲೆ ಮಾಡಿ ಕನಸವಿ ಗ್ರಾಮದ ಹೊರವಲಯದಲ್ಲಿ ಮೃತದೇಹವನ್ನು ಬಚ್ಚಿಟ್ಟಿದ್ದನು. ಈ ಹಿನ್ನೆಲೆಯಲ್ಲಿ ಪತ್ನಿ ಭೀಮವ್ವ ಮುದಗಲ್ ಪೊಲೀಸ್ ಠಾಣೆಗೆ ದೂರು ನೀಡಿದ್ದರು.

ಮಗು ನಾಪತ್ತೆಯಾಗಿರುವ ಕುರಿತು ಪ್ರಕರಣ ದಾಖಲಿಸಿಕೊಡಿದ್ದ ಪೊಲೀಸರಿಗೆ ಮಹಾಂತೇಶ್ ಮೇಲೆ ಅನುಮಾನ ಬಂದಿದೆ. ವಿಚಾರಣೆಗೊಳಪಡಿಸಿದಾಗ ತಪೊಪ್ಪಿಕೊಂಡಿದ್ದು, ಮಗುವಿನ ಮೃತದೇಹವನ್ನು ಸುಟ್ಟಿರುವುದಾಗಿ ಹೇಳಿದ್ದ. 3 ದಿನಗಳ ಬಳಿಕ ಶವ ಬಚ್ಚಿಟ್ಟಿರುವ ಸ್ಥಳವನ್ನು ತೋರಿಸಿದ್ದಾನೆನ್ನಲಾಗಿದೆ.

Ads on article

Advertise in articles 1

advertising articles 2

Advertise under the article