ಕೊಂಕಣಿಯ ಬಹು ನಿರೀಕ್ಷಿತ ಚಲನಚಿತ್ರ ಚಲನಚಿತ್ರ ‘ಅಸ್ಮಿತಾಯ್’ ಸೆಪ್ಟೆಂಬರ್ 15 ರಂದು ತೆರೆಗೆ- VIDEO
Thursday, September 7, 2023
ಕೊಂಕಣಿಯ ಕಲೆ, ಸಾಹಿತ್ಯ, ಸಂಸ್ಕೃತಿಯ ಎಲ್ಲಾ ಕ್ಷೇತ್ರಗಳಲ್ಲಿ ಮಹತ್ತರ ಸಾಧನೆ ಮಾಡಿದ, ಗಿನ್ನೆಸ್ ದಾಖಲೆ ಬರೆದ ಪ್ರಮುಖ ಸಾಂಸ್ಕೃತಿಕ ಸಂಘಟನೆ ಮಾಂಡ್ ಸೊಭಾಣ್ ಸಿನೆಮಾ ಕ್ಷೇತ್ರಕ್ಕೆ ಪಾದಾರ್ಪಣೆ ಮಾಡಿ ಅಸ್ಮಿತಾಯ್ ಚಲನಚಿತ್ರವನ್ನು ನಿರ್ಮಿಸಿದ್ದು ಈ ಸಿನೆಮಾವು ಸೆಪ್ಟೆಂಬರ್ 15 ರಂದು ತೆರೆ ಕಾಣಲಿದೆ.
ಕೊಂಕಣಿ ಜನರ ಅಸ್ಮಿತೆಯ ಹುಡುಕಾಟದ ಎಳೆಯೊಂದಿಗೆ ಸಾಗುವ ಕತೆಯು ಗೋವಾದಿಂದ ವಲಸೆ, ಕೊಂಕಣಿಯ ಶ್ರೀಮಂತ ಜನಪದ ಪರಂಪರೆಯ ದೃಶ್ಯ ವೈಭವವನ್ನು ನವಿರಾದ ಪ್ರೇಮಕತೆಯೊಂದಿಗೆ ತೋರಿಸುತ್ತದೆ. ಎರಿಕ್ ಒಝೇರಿಯೊ ಬರೆದ ಮೂಲಕತೆಗೆ ಜೊಯೆಲ್ ಪಿರೇರಾ ಚಿತ್ರಕತೆ ಮತ್ತು ಸಂಭಾಷಣೆ ರಚಿಸಿದ್ದು ಯುವ ನಿರ್ದೇಶಕ ವಿಲಾಸ್ ರತ್ನಾಕರ್ ಕ್ಷತ್ರಿಯ ನಿರ್ದೇಶನ ನೀಡಿದ್ದಾರೆ. ಬಾಲರಾಜ ಗೌಡ ಸುಂದರವಾಗಿ ಸೆರೆ ಹಿಡಿದ ಕರಾವಳಿ, ಮಲೆನಾಡು ಮತ್ತು ಗೋವಾದ ದೃಶ್ಯಗಳನ್ನು ಮೇವಿನ್ ಜೊಯೆಲ್ ಪಿಂಟೊ ಉತ್ತಮವಾಗಿ ಸಂಕಲನ ಮಾಡಿದ್ದಾರೆ.
ಆರು ಹಾಡುಗಳಿಗೆ ಆಲ್ವಿನ್ ಫೆರ್ನಾಂಡಿಸ್, ಕ್ಯಾಜಿಟನ್ ಡಾಯಸ್, ಜೊಯೆಲ್ ಪಿರೇರಾ ಹಾಗೂ ಎರಿಕ್ ಒಝೇರಿಯೊ ಮುದಗೊಳಿಸುವ ಸಂಗೀತ ರಚಿಸಿದ್ದು, ಪ್ರಸಿದ್ಧ ಗಾಯಕ ನಿಹಾಲ್ ತಾವ್ರೊ ಹಾಗೂ ಇತರೆ ಗಾಯಕರು ದನಿಗೂಡಿಸಿದ್ದಾರೆ. ಡೆನಿಸ್ ಮೊಂತೇರೊ, ಅಶ್ವಿನ್ ಡಿಕೊಸ್ತಾ, ವೆನ್ಸಿಟಾ ಡಾಯಸ್, ಪ್ರಿನ್ಸ್ ಜೇಕಬ್, ಸಾಯಿಶ್ ಪನಂದಿಕರ್, ಗೌರೀಶ್ ವೆರ್ಣೆಕರ್, ಸ್ಟ್ಯಾನಿ ಆಲ್ವಾರಿಸ್, ನೆಲ್ಲು ಪೆರ್ಮನ್ನೂರ್, ಸುನೀಲ್ ಸಿದ್ದಿ, ಲುಲು ಫೊರ್ಟೆಸ್, ನವೀನ್ ಲೋಬೊ ಹೀಗೆ ಗೋವಾ ಮತ್ತು ಮಂಗಳೂರಿನ ಖ್ಯಾತ ಕಲಾವಿದರು ಪ್ರಮುಖ ಭೂಮಿಕೆಯಲ್ಲಿದ್ದಾರೆ. ಇತರ ಸುಮಾರು 500 ಕ್ಕೂ ಮಿಕ್ಕಿ ಕಲಾವಿದರು ಪ್ರಥಮ ಬಾರಿಗೆ ಕ್ಯಾಮರಾದ ಮುಂದೆ ಕಾಣಿಸಲಿದ್ದಾರೆ.
ಈ ಚಿತ್ರವು ಸೆಪ್ಟೆಂಬರ್ 15 ರಿಂದ ಮಂಗಳೂರಿನ ಭಾರತ್ ಸಿನೆಮಾಸ್ ನಲ್ಲಿ 2 ದೇಖಾವೆಗಳು ಹಾಗೂ ಸಿನೆ ಗ್ಯಾಲಕ್ಸಿ ಸುರತ್ಕಲ್, ಭಾರತ್ ಸಿನೆಮಾಸ್ ಪಡುಬಿದ್ರಿ, ಭಾರತ್ ಸಿನೆಮಾಸ್ ಮಣಿಪಾಲ, ಭಾರತ್ ಸಿನೆಮಾಸ್ ಪುತ್ತೂರು, ಭಾರತ್ ಟಾಕೀಸ್ ಬೆಳ್ತಂಗಡಿ ಮತ್ತು ಪ್ಲಾನೆಟ್ ಕಾರ್ಕಳ ಇಲ್ಲಿ ತಲಾ ಒಂದು ದೇಖಾವೆ ಮತ್ತು ಕಲ್ಪನಾ ಟಾಕೀಸ್ ಉಡುಪಿ ಹಾಗೂ ಪದ್ಮಾಂಜಲಿ ಟಾಕೀಸ್ ಹೊನ್ನಾವರದಲ್ಲಿ ತಲಾ ನಾಲ್ಕು ದೇಖಾವೆಗಳು ಪ್ರದರ್ಶನಗೊಳ್ಳಲಿವೆ. ನಂತರ ಬೆಂಗಳೂರು, ಮುಂಬಯಿ, ಗೋವಾ ಹಾಗೂ ಯುಎಇ, ಕುವೇಯ್ಟ್, ಖತಾರ್, ಬಾಹ್ರೇಯ್ನ್, ಓಮನ್, ಇಸ್ರಾಯೆಲ್, ಜರ್ಮನಿ, ಆಸ್ಟ್ರೇಲಿಯಾ, ಆಯರ್ಲೆಂಡ್, ಅಮೇರಿಕಾ ಮತ್ತಿತರ ದೇಶಗಳಲ್ಲಿ ಪ್ರದರ್ಶನಕ್ಕೆ ಸ್ಥಳೀಯ ಸಹಕಾರದಲ್ಲಿ ಏರ್ಪಾಡು ಮಾಡಲಾಗುವುದು. ಜನರ ಕೋರಿಕೆ ಮೇರೆಗೆ ಇತರ ಕಡೆಗಳಲ್ಲೂ ಪ್ರದರ್ಶನಕ್ಕೆ ಅವಕಾಶವಿರಲಿದೆ.
ಸೆಪ್ಟೆಂಬರ್ 10 ರಂದು ಮಂಗಳೂರಿನ ಬಿಜಯ್, ಪುತ್ತೂರು ಹಾಗೂ ಮಣಿಪಾಲದ ಭಾರತ್ ಸಿನೆಮಾದಲ್ಲಿ ಸಂಜೆ 4.00 ಗಂಟೆಗೆ ಏಕ ಕಾಲದಲ್ಲಿ ಮೂರು ಕಡೆ ಪ್ರೀಮಿಯರ್ ಪ್ರದರ್ಶನ ನಡೆಯಲಿದೆ. ಮಂಗಳೂರಿನ ಪ್ರದರ್ಶನವನ್ನು ಗೋವಾದ ಶಾಸಕ ದಂಪತಿ ಮೈಕಲ್ ಲೋಬೊ, ಡಿಲಾಯ್ಲಾ ಲೋಬೊ ಉದ್ಘಾಟಿಸಲಿದ್ದಾರೆ.
`ಚಲನಚಿತ್ರದಿಂದ ಚಳುವಳಿ’ ಎಂಬ ಧ್ಯೇಯದೊಡನೆ ಮಾಂಡ್ ಸೊಭಾಣ್ ಈ ಚಿತ್ರವನ್ನು ಜನರ, ದಾನಿಗಳ ಸಹಕಾರದಿಂದ ನಿರ್ಮಿಸಿದ್ದು ಅಧ್ಯಕ್ಷ ಲುವಿ ಜೆ ಪಿಂಟೊ ನಿರ್ಮಾಣದ ಉಸ್ತುವಾರಿ ವಹಿಸಿದ್ದಾರೆ.
ಪತ್ರಿಕಾ ಗೋಷ್ಟಿಯಲ್ಲಿ ಎರಿಕ್ ಒಝೆರಿಯೊ – (ಕತೆ - ಅಸ್ಮಿತಾಯ್) ಲುವಿಸ್ ಜೆ. ಪಿಂಟೊ – (ನಿರ್ಮಾಪಕ - ಅಸ್ಮಿತಾಯ್) ಜೊಯೆಲ್ ಪಿರೇರಾ – ( ಚಿತ್ರಕತೆ, ಸಂಭಾಷಣೆ - ಅಸ್ಮಿತಾಯ್) ಡೆನಿಸ್ ಮೊಂತೇರೊ, ಅಶ್ವಿನ್ ಡಿಕೋಸ್ತಾ, ವೆನ್ಸಿಟಾ ಡಾಯಸ್, ಸ್ಟ್ಯಾನಿ ಆಲ್ವಾರಿಸ್, ನೆಲ್ಲು ಪೆರ್ಮನ್ನೂರ್, (ಪಾತ್ರವರ್ಗ) ಉಪಸ್ಥಿತರಿದ್ದರು.
The much awaited Konkani movie ‘Osmitay’ will hit the screens on September 15
The highly anticipated Konkani film, ‘Osmitay’, is set to grace the silver screens on September 15th, marking a significant milestone for the Guinness record holding cultural organization, Mandd Sobhann. Mandd Sobhann has made remarkable contributions to Konkani art, literature, and culture across various domains, and their debut production, ‘Osmitay’, promises to be a cinematic treat for audiences.
Set against the backdrop of the Konkani people's quest for identity, this captivating story unfolds the narrative of migration from Goa and showcases the visual splendor of Konkani's rich folk heritage, all woven into a tender love story written by Eric Ozario and the screenplay and dialogues by Joel Pereira comes to life through the brilliant direction of the young and talented filmmaker, Vilas Ratnakar Kshatriya. The scenic beauty of the coast, hills, and Goa is exquisitely captured by cinematographer Balaraja Gowda, with skillful editing by Mavin Joel Pinto.
The film's soulful melodies are composed by the talented quartet of Alwyn Fernandes, Cajetan Dias, Joel Pereira, and Eric Ozario, featuring the renowned singer Nihal Tauro and an array of talented vocalists. The cast includes stellar performances by Denis Monteiro, Ashwin D’Costa, Wencita Dias, Prince Jacob, Sayish Panandikar, Gaurish Vernekar, Stany Alvares, Nellu Permannur, Sunil Siddi, Lulu Fortes, Naveen Lobo, and other renowned artists from Goa and Mangaluru. Notably, around 500 other talented actors make their debut appearances in front of the camera.
‘Osmitay’ will grace the screens starting September 15th at Bharat Cinemas Mangaluru with two screens, along with screenings at Cine Galaxy Surathkal, Bharat Cinemas Padubidri, Bharat Cinemas Manipal, Bharat Cinemas Puttur, Bharat Talkies Belthangady, and Planet Karkala, each with one screen dedicated to the film. Additionally, Kalpana Talkies Udupi and Padmanjali Talkies Honnavar will contribute with four screens each to ensure that audiences get the opportunity to experience this cinematic masterpiece. Following the initial release, arrangements will be made for exhibition in various locations, including Bengaluru, Mumbai, Goa, and UAE, Kuwait, Qatar, Bahrain, Oman, Israel, Germany, Australia, Ireland, USA and several countries around the world.
On September 10th, there will be three simultaneous premiere screenings at 4:00 PM at Bejai Bharat Cinemas in Mangaluru, Puttur, and Bharat Cinemas in Manipal. The inauguration in Mangaluru will be graced by Goa MLA couple, Michael Lobo and Delilah Lobo.
Mandd Sobhann has undertaken the ambitious production of ‘Osmitay’ with the invaluable support of the community and donors, driven by their mission to contribute to the cinematic movement. President Louis J. Pinto leads this remarkable endeavor. The film promises not only to be a visual treat but also a testament to the rich cultural heritage of Konkani art and storytelling.