ತಮಿಳು ನಟ ವಿಜಯ್ ಆ್ಯಂಟನಿಯ 16 ವರ್ಷದ ಪುತ್ರಿ ಆತ್ಮಹತ್ಯೆ
Tuesday, September 19, 2023
ಚೆನ್ನೈ: ತಮಿಳು ನಟ, ಸಂಗೀತ ನಿರ್ದೇಶಕ ವಿಜಯ್ ಆ್ಯಂಟನಿ ಅವರ ಪುತ್ರಿ ಮೀರಾ ಇಂದು ಮುಂಜಾನೆ ತಮ್ಮ ನಿವಾಸದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಚೆನ್ನೈನ ಖಾಸಗಿ ಶಾಲೆಯೊಂದರಲ್ಲಿ ಈಕೆ 12ನೇ ತರಗತಿ ಓದುತ್ತಿದ್ದಳು. ಮೀರಾಗೆ 16 ವರ್ಷ ವಯಸ್ಸಾಗಿತ್ತು.
ಮೀರಾ ಕೆಲ ಸಮಯದಿಂದ ಖಿನ್ನತೆಯಿಂದ ಬಳಲುತ್ತಿದ್ದರು, ಬೆಳಗಿನ ಜಾವ 3 ಗಂಟೆ ಸುಮಾರಿಗೆ ಆಕೆಯ ತಂದೆ ಮಗಳ ಕೋಣೆಯಲ್ಲಿ ನೋಡಿದಾಗ ಆಕೆಯ ದುಪ್ಪಟ್ಟಾ ಬಳಸಿ ಫ್ಯಾನ್‌ಗೆ ನೇಣು ಬಿಗಿದುಕೊಂಡು ನೇಣು ಬಿಗಿದುಕೊಂಡಿರುವುದು ಕಂಡುಬಂದಿದೆ.
ಮನೆಯ ಕೆಲಸಗಾರರ ಸಹಾಯದಿಂದ ಆಕೆಯನ್ನು ಕೆಳಗಿಳಿಸಿ ಆಸ್ಪತ್ರೆಗೆ ಕರೆದೊಯ್ದರಾದರೂ ಆಕೆಯ ಜೀವ ಉಳಿಸಲು ಸಾಧ್ಯವಾಗಲಿಲ್ಲ ಎಂದು ವರದಿಯಾಗಿದೆ.
ಆಳ್ವಾರಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.