ಅಶ್ಲೀಲ ವಿಡಿಯೋ ವೈರಲ್ ಮಾಡುವ ಬೆದರಿಕೆ- ಆತ್ಮಹತ್ಯೆ ಗೆ ಯತ್ನಿಸಿದ 17 ವರ್ಷದ ವಿದ್ಯಾರ್ಥಿನಿ ಸಾವು
Monday, September 4, 2023
ಜಗಳೂರು:ಅಶ್ಲೀಲ ವಿಡಿಯೊ ಹರಿಬಿಡುವುದಾಗಿ ಯುವಕರಿಬ್ಬರು ಬೆದರಿಕೆ ಹಾಕಿದ್ದರಿಂದ ಮನನೊಂದು
ಆತ್ಮಹತ್ಯೆಗೆ ಯತ್ನಿಸಿದ್ದ 17 ವರ್ಷದ ವಿದ್ಯಾರ್ಥಿನಿಯೊಬ್ಬಳು ಚಿಕಿತ್ಸೆಗೆ ಸ್ಪಂದಿಸದೇ ಭಾನುವಾರ ಸಾವನ್ನಪ್ಪಿದ್ದಾರೆ.
ಕೆಲ ದಿನಗಳ ಹಿಂದೆ ಆತ್ಮಹತ್ಯೆಗೆ ಯತ್ನಿಸಿ ಗಂಭೀರವಾಗಿ
ಗಾಯ ಗೊಂಡಿದ್ದ ವಿದ್ಯಾರ್ಥಿ ನಿಯನ್ನು ಮಣಿಪಾಲದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ವಿದ್ಯಾರ್ಥಿನಿಯ ವಿಡಿಯೊ ಹರಿಬಿಡುವುದಾಗಿ ಬೆದರಿಸಿದ್ದ ತಾಲ್ಲೂಕಿನ ಮಧು ಮತ್ತು ನಾಗೇಂದ್ರಸ್ವಾಮಿ ವಿರುದ್ಧ ಜಗಳೂರು ಠಾಣೆಯಲ್ಲಿ ಪೋಕ್ಸ್ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.
ಮಗಳು ಪ್ರತಿದಿನ ಗ್ರಾಮದಿಂದ ಕಾಲೇಜಿಗೆ ಹೋಗುತ್ತಿದ್ದಾಗ ಇಬ್ಬರು ಯುವಕರ ಪರಿಚಯವಾಗಿತ್ತು. ಅವರು ವಾರದ ಹಿಂದೆ ಬೇಕರಿ ತಿನಿಸಿನಲ್ಲಿ ಮತ್ತು ಬರಿಸುವ ವಸ್ತುವನ್ನು ಸೇರಿಸಿ ತಿನ್ನಲು ಕೊಟ್ಟಿದ್ದಾರೆ. ಆಕೆ ಪ್ರಜ್ಞೆ ತಪ್ಪಿದಾಗ ಮೊಬೈಲ್‌ನಿಂದ ಅಶ್ಲೀಲ ವಿಡಿಯೊ ಚಿತ್ರೀಕರಿಸಿಕೊಂಡಿದ್ದರು. ಬಳಿಕ ಸಾಮಾಜಿಕ ಜಾಲತಾಣದಲ್ಲಿ ಹೆದರಿಸಿದ್ದರು ಎಂದು ಮೃತ ಬಾಲಕಿಯ ಪಾಲಕರು ಪೊಲೀಸರಿಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.
ವಿಡಿಯೊ ಹರಿಬಿಬಿಡುವುದಾಗಿ`ಮಧು ಎಂಬ ಯುವಕ ನಮ್ಮ ಮನೆ ಎದುರು ಬಂದು ತನ್ನ ಜೊತೆಯಲ್ಲಿ ಬರುವಂತೆ ಪೀಡಿಸುತ್ತಿದ್ದ. ಇದರಿಂದ ಮೈಮೇಲೆ ಪೆಟ್ರೋಲ್ ಸುರಿದುಕೊಂಡು ಆಕೆ ಬೆಂಕಿ ಹಚ್ಚಿಕೊಂಡಿದ್ದಳು' ಎಂದಿದ್ದಾರೆ. "ನನಗೆ ಆದ ಅನ್ಯಾಯ ಬೇರೆ ಯಾವುದೇ ಹೆಣ್ಣುಮಕ್ಕಳಿಗೆ
ಆಗಬಾರದು. ದಯವಿಟ್ಟು ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ಎಲ್ಲ ದುಷ್ಪರಿಗೂ ಇದು ಪಾಠವಾಗ ಬೇಕು' ಎಂದು ವಿದ್ಯಾರ್ಥಿನಿ ಹೇಳಿರುವ ವಿಡಿಯೊ ಹರಿದಾಡಿದೆ.