-->
ಗೃಹಲಕ್ಷ್ಮೀ ಯ ರೂ 2 ಸಾವಿರ ವನ್ನು  ಈ ರೀತಿ ಮಾಡಿದರೆ ನೀವು ಲಕ್ಷಾಧೀಶರಾಗಬಹುದು!

ಗೃಹಲಕ್ಷ್ಮೀ ಯ ರೂ 2 ಸಾವಿರ ವನ್ನು ಈ ರೀತಿ ಮಾಡಿದರೆ ನೀವು ಲಕ್ಷಾಧೀಶರಾಗಬಹುದು!


ರಾಜ್ಯ ಸರಕಾರದ ಮಹತ್ವಾಕಾಂಕ್ಷೆಯ ಗೃಹಲಕ್ಷ್ಮೀ ಯೋಜನೆ ಆರಂಭವಾಗಿದೆ. ರಾಜ್ಯದ 1 ಕೋಟಿಗೂ ಅಧಿಕ ಮಂದಿ ಇದರ ಪ್ರಯೋಜನ ಪಡೆದಿದ್ದಾರೆ.



ಪ್ರತಿ ಮಹಿಳೆಯರು ರೂ 2 ಸಾವಿರ ಹಣವನ್ನು ಈ ಯೋಜನೆಯಲ್ಲಿ ಪ್ರತಿ ತಿಂಗಳು ಪಡೆಯಲಿದ್ದಾರೆ.  ಈ ಹಣವನ್ನು ಈ ರೀತಿ ಉಳಿಸಿದ್ದಲ್ಲಿ  5 ವರ್ಷದಲ್ಲಿ ಲಕ್ಷಾಧೀಶರಾಗಬಹುದು.

ಹಲವರಿಗೆ ಈ ಯೋಜನೆ ಯಿಂದ ಬರುವ ಹಣ ತುರ್ತಾಗಿ ಬಳಕೆಗೆ , ದೈನಂದಿನ ಅವಶ್ಯಕತೆ ಗೆ ಅಗತ್ಯವಿರುತ್ತದೆ. ಆದರೆ ಈ ಹಣವನ್ನು ಉಳಿತಾಯ ಮಾಡಬೇಕೆನ್ನುವವರು ಈ ಯೋಜನೆ ಆಯ್ಕೆ ಮಾಡಬಹುದು

ಅಂಚೆ ಕಚೇರಿಯಲ್ಲಿ ಆರ್ ಡಿ ಮಾಡಿ

ಗೃಹಲಕ್ಷ್ಮೀ ಯೋಜನೆಯಲ್ಲಿ ಬರುವ ರೂ 2000 ಹಣವನ್ನು ಅಂಚೆ ಇಲಾಖೆಯಲ್ಲಿ ಆರ್ ಡಿ ಖಾತೆ ಮಾಡಿ ಜಮೆ ಮಾಡಿ. 5 ವರ್ಷದ ( 60 ತಿಂಗಳ ) ಆರ್ ಡಿ ಮಾಡಿದರೆ ರೂ 1 ಲಕ್ಷ 20 ಸಾವಿರ ಹೂಡಿಕೆ ಮಾಡಿದಂತಾಗುತ್ತದೆ. ಆರ್ ಡಿ ಅವಧಿ ಕೊನೆಗೊಂಡಾಗ 21982 ರೂ ಬಡ್ಡಿ ಸಿಗುತ್ತದೆ. ಒಟ್ಟು ರೂ 1,41,982 ಸಿಗುತ್ತದೆ. ಇದು ಗೃಹ ಲಕ್ಷ್ಮಿ ಹಣವನ್ನು ಹೂಡಿಕೆ ಮಾಡಿ ಅಧಿಕ ಲಾಭ ಪಡೆಯುವ ವಿಧಾನವಾಗಿದೆ.

Ads on article

Advertise in articles 1

advertising articles 2

Advertise under the article