ಮಂಗಳ ಸಂಕ್ರಮಣದ ಪ್ರಭಾವದಿಂದ ಶುಭಫಲಗಳನ್ನು ಪಡೆಯಲಿದ್ದರೆ ಈ 3 ರಾಶಿಯವರು..!
Wednesday, September 27, 2023
ಮಂಗಳ ತುಲಾರಾಶಿಗೆ ಚಲಿಸುವಾಗ ಅದರ ಪ್ರಭಾವವು ಮೇಷದಿಂದ ಮೀನದವರೆಗಿನ ಎಲ್ಲಾ ರಾಶಿಚಕ್ರ ಚಿಹ್ನೆಗಳ ಜೀವನದಲ್ಲಿ ಕಂಡುಬರುತ್ತದೆ. ವಿಶೇಷವಾಗಿ ಮಂಗಳದ ಈ ಸಂಕ್ರಮಣದಿಂದ 3 ರಾಶಿಯವರು ಸಾಕಷ್ಟು ಆರ್ಥಿಕ ಪ್ರಯೋಜನಗಳನ್ನು ಪಡೆಯುತ್ತಾರೆ.
ಮೇಷ ರಾಶಿ
ಮಂಗಳ ಗ್ರಹ ಮೇಷ ರಾಶಿಯ 7ನೇ ಮನೆಗೆ ಸಾಗುತ್ತದೆ. ಹಾಗೆಯೇ ಮೇಷ ರಾಶಿಯ ಅಧಿಪತಿ ಮಂಗಳ ಗ್ರಹವಾಗಿದೆ. ಹೀಗಾಗಿ ಮೇಷ ರಾಶಿಯ ಸ್ಥಳೀಯರು ಮಂಗಳ ಸಂಚಾರದಿಂದ ಉತ್ತಮ ಲಾಭವನ್ನು ಪಡೆಯುತ್ತಾರೆ. ಈ ರಾಶಿಯವರು ಕೂಡ ಶ್ರೀಮಂತರಾಗುವ ಬಯಕೆಯನ್ನು ಹೊಂದಿದ್ದರೆ, ಈ ಅವಧಿಯಲ್ಲಿ ಅದು ಈಡೇರುವ ಸಾಧ್ಯತೆಯಿದೆ.
ಮಿಥುನ ರಾಶಿ
ಮಂಗಳ ಮಿಥುನ ರಾಶಿಯ 5ನೇ ಮನೆಗೆ ಸಾಗುತ್ತದೆ. ಹೀಗಾಗಿ ಅಕ್ಟೋಬರ್ 3 ರಿಂದ ಮಿಥುನ ರಾಶಿಯವರಿಗೆ ಅದೃಷ್ಟ ಒಲಿದು ಬರಲಿದೆ. ಅಕ್ಟೋಬರ್‌ನಲ್ಲಿ ಉತ್ತಮ ಲಾಭದೊಂದಿಗೆ ವ್ಯಾಪಾರವನ್ನು ವಿಸ್ತರಿಸಲು ಉದ್ಯಮಿಗಳು ಅವಕಾಶಗಳನ್ನು ಪಡೆಯುತ್ತಾರೆ. ವಿವಾಹಿತರ ಜೀವನ ಸಿಹಿ ಮತ್ತು ಸಂತೋಷದಿಂದ ಕೂಡಿರುತ್ತದೆ.
ಮಕರ ರಾಶಿ
ಮಂಗಳ ಗ್ರಹ ಮಕರ ರಾಶಿಯ 10ನೇ ಮನೆಗೆ ಸಾಗುತ್ತದೆ. ಹೀಗಾಗಿ ಈ ರಾಶಿಚಕ್ರದವರು ಅಪಾರ ಲಾಭಗಳನ್ನು ಪಡೆಯುತ್ತಾರೆ. ಕೋರ್ಟು ಕೇಸುಗಳು ಬಹಳ ದಿನಗಳಿಂದ ನಡೆಯುತ್ತಿದ್ದರೆ ಈ ವೇಳೆಗೆ ಮುಗಿಯುತ್ತದೆ. ಅದೂ ಕೂಡ ತೀರ್ಪುಗಳು ನಿಮ್ಮ ಪರವಾಗಿಯೇ ಇರುತ್ತವೆ. ಹಣಕ್ಕೆ ಸಂಬಂಧಿಸಿದಂತೆ ಈ ರಾಶಿಯವರು ಸಾಕಷ್ಟು ಹಣದ ಒಳಹರಿವನ್ನು ಪಡೆಯುತ್ತಾರೆ.