ದಂಪತಿ ನಡುವಿನ ಜಗಳದಿಂದ 45 ದಿನಗಳ ಹಸುಗೂಸು ಬಲಿ
Sunday, September 3, 2023
ತೆಲಂಗಾಣ: ದಂಪತಿಯ ನಡುವೆ ನಡೆದ ಜಗಳದಲ್ಲಿ 45 ದಿನಗಳ ಕೂಸೊಂದು ಪ್ರಾಣ ಬಿಟ್ಟಿರುವ ಹೃದಯ ವಿದ್ರಾವಕಾರಿ ಘಟನೆಯೊಂದು ಭಾನುವಾರ ಮೇದಕ್ ಜಿಲ್ಲೆಯಲ್ಲಿ ನಡೆದಿದೆ.
ಮೇದಕ್ ಜಿಲ್ಲೆಯ ಶಂಕರಂಪೇಟ್ ಕೇಂದ್ರದಲ್ಲಿರುವ ನಿರ್ಮಲಾ ಹಾಗೂ ರಮೇಶ್ ದಂಪತಿಗೆ ಇಬ್ಬರು ಗಂಡು ಪುತ್ರದ್ದಾರೆ. ಮದ್ಯವ್ಯಸನಿ ಜನಮೂಲ ರಮೇಶ್ ಈತನ 45ದಿನಗಳ ಕೂದು ಜಸ್ವಂತ್ ನನ್ನು ಕೊಲೆ ಮಾಡಿದ್ದಾನೆ ಎಂದು ಕುಟುಂಬದವರು ಆರೋಪಿಸಿದ್ದಾರೆ.
ಜನಮೂಲ ರಮೇಶ್ ಪತ್ನಿ ನಿರ್ಮಲಾ ಪೆದ್ದ ಶಂಕರಂಪೇಟೆ ಗ್ರಾಮಕ್ಕೆ ಹೆರಿಗೆಗೆಂದು ತನ್ನ ತಾಯಿಯ ಮನೆಗೆ ಬಂದು ಅಲ್ಲೇ ಇದ್ದಳು. ಈ ವೇಳೆ ಪತ್ನಿ ಹಾಗೂ ಮಗುವನ್ನು ನೋಡಲು ಬಂದಿದ್ದ ಜನಮೂಲ ರಮೇಶ್ ನಿರ್ಮಲಾಳನ್ನು ತನ್ನ ಮನೆಗೆ ಕರೆದುಕೊಂಡು ಹೋಗುವ ಭರದಲ್ಲಿ ಅತ್ತೆಯ ಮನೆಯಲ್ಲಿ ಜಗಳ ಆರಂಭಿಸಿದ್ದಾನೆ. ಮದ್ಯಪಾನ ಮಾಡಿ ಬಂದ ರಮೇಶ್ ಈ ವೇಳೆ ಪತ್ನಿ ನಿರ್ಮಲಾಳೊಂದಿಗೆ ಜಗಳವಾಡಿದ್ದಾನೆ. ಬಳಿಕ ತೊಟ್ಟಿಲಿನಲ್ಲಿದ್ದ ಮಗುವನ್ನು ಎತ್ತಿಕೊಂಡಿದ್ದಾನೆ. ಜಗಳದ ವೇಳೆ ಮಗುವನ್ನು ಹಿಡಿದುಕೊಳ್ಳಲು ಯತ್ನಿಸಿದಾಗ ಇಬ್ಬರ ನಡುವೆ ನಜ್ಜುಗುಜ್ಜಾಗಿ ಬಾಲಕ ಮೃತಪಟ್ಟಿದ್ದಾನೆ.
ಪಾನಮತ್ತನಾಗಿದ್ದ ರಮೇಶ್‌ನನ್ನು ನೆರೆಹೊರೆಯವರು ಹಿಡಿದು ಜಗಳ ನಿಲ್ಲಿಸಿದ್ದಾರೆ. ಕಣ್ಣೆದುರೇ ಪುತ್ರ ಸಾವನ್ನಪ್ಪಿದ್ದರಿಂದ ತಾಯಿ ಕಣ್ಣೀರು ಹಾಕುತ್ತಿದ್ದಾರೆ.