ಸೂರ್ಯ ಸಂಕ್ರಮಣದಿಂದ ಅಧಿಕ ಲಾಭ ಪಡೆಯುವ ಆ 4 ಅದೃಷ್ಟದ ರಾಶಿಗಳು ಯಾವುದು ಗೊತ್ತಾ?
Monday, September 11, 2023
ಮೇಷ ರಾಶಿ :
ಸೂರ್ಯನ ಕಿರಣದಂತೆ ಮೇಷ ರಾಶಿಯವರ ಅದೃಷ್ಟವು ಪ್ರಕಾಶಮಾನವಾಗಿ ಹೊಳೆಯುತ್ತದೆ. ಸಮಾಜದಲ್ಲಿ ಖ್ಯಾತಿ ಹೆಚ್ಚಾಗುತ್ತದೆ. ಉತ್ತಮ ಆರೋಗ್ಯಕ್ಕಾಗಿ, ಆರೋಗ್ಯಕರ ಆಹಾರವನ್ನು ಅನುಸರಿಸಿ.
ಭಗವಾನ್ ಸೂರ್ಯನಿಂದ ಎಲ್ಲಾ ರೀತಿಯ ಪ್ರಯೋಜನಗಳನ್ನು ಪಡೆಯಲಿದ್ದೀರಿ. ಆರ್ಥಿಕ ಸಮಸ್ಯೆಗಳಿಂದ ಮುಕ್ತಿ ಹೊಂದುವಿರಿ. ಹಣದ ಹರಿವಿನಲ್ಲಿ ಯಾವುದೇ ಕೊರತೆ ಉಂಟಾಗುವುದಿಲ್ಲ. ಕೆಲಸದಲ್ಲಿ ಉನ್ನತಿ ಮತ್ತು ಬಡ್ತಿ ಪಡೆಯುವ ಸಾಧ್ಯತೆ ಹೆಚ್ಚಿದೆ.
ವೃಶ್ಚಿಕ ರಾಶಿ :
ಸೂರ್ಯ ಸಂಕ್ರಮಣ ವೃಶ್ಚಿಕ ರಾಶಿಯವರಿಗೆ ಅದೃಷ್ಟವನ್ನು ತರುತ್ತದೆ. ಜೀವನದಲ್ಲಿ ಉದ್ಭವಿಸಿದ ಎಲ್ಲಾ ಸಮಸ್ಯೆಗಳು ಪರಿಹಾರವಾಗುವುದು. ಪ್ರೇಮ ಜೀವನದಲ್ಲಿ ಕೆಲವು ಸಮಸ್ಯೆಗಳು ಎದುರಾಗಬಹುದು. ಆದರೆ ನಿಮ್ಮ ಸಂಗಾತಿಯೊಂದಿಗೆ ಮನ ಬಿಚ್ಚಿ ಮಾತನಾಡಿ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಿ.
ಧನು ರಾಶಿ :
ಸೂರ್ಯನ ಸಂಚಾರವು ಧನು ರಾಶಿಗೆ ಅನುಕೂಲಕರವೆಂದು ಪರಿಗಣಿಸಲಾಗಿದೆ. ಉದ್ಯೋಗದಲ್ಲಿರುವವರಿಗೆ ಈ ಅವಧಿಯು ಹೆಚ್ಚು ಅನುಕೂಲಕರವಾಗಿರುತ್ತದೆ. ವ್ಯಾಪಾರದಲ್ಲಿ ಧನಲಾಭವೂ ಇರುತ್ತದೆ. ದೈಹಿಕ ಆರೋಗ್ಯಕ್ಕೆ ಹೆಚ್ಚು ಗಮನ ಬೇಕು. ಕುಟುಂಬ ಸಮೇತ ವಿದೇಶಕ್ಕೆ ಹೋಗುವ ಅವಕಾಶ ಸಿಗಲಿದೆ.